ಚಾಮರಾಜನಗರ : ಗಡಿಜಿಲ್ಲೆಯಾದ ಚಾಮರಾಜನಗರಕ್ಕೂ ಕೂಡ ಚುನಾವಣಾ ಬಿಸಿ ತಟ್ಟಿದೆ. ಮೀಸಲು ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರುತ್ತಿದ್ದೂ, ಕೈ ಅಭ್ಯರ್ಥಿ ಸುನಿಲ್ ಬೋಸ್ ಪ್ರಚಾರ ಆರಂಭಿಸಿದ್ದಾರೆ.
ಸುನಿಲ್ ಬೋಸ್ ಪ್ರಚಾರದ ನಡೆಗೆ ಧ್ರುವನಾರಾಯಣ್ ಅಭಿಮಾನಿಗಳ ಬೇಸರ ವ್ಯಕ್ತಪಡಿಸ್ತಾ ಇದಾರೆ. ಪ್ರಚಾರದ ಪೋಸ್ಟರ್ ನಲ್ಲಿ ಮಾಜಿ ಸಂಸದ ದಿ. ಧ್ರುವನಾರಾಯಣ್ ಫೋಟೋ ಇಲ್ಲ ಎಂದು ಅಭಿಮಾನಿಗಳು ಅಸಮಧಾನಗೊಂಡಿದ್ದಾರೆ.
ಅಷ್ಟು ಮಾತ್ರವಲ್ಲದೇ, ಧ್ರುವನಾರಾಯಣ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ಹೊರ ಹಾಕ್ತಾ ಇದಾರೆ. ಧ್ರುವನಾರಾಯಣ್ ಸಾವಿಗೆ ಸುನಿಲ್ ಬೋಸ್ ಮತ್ತು ಸಚಿವ ಎಚ್.ಸಿ. ಮಹದೇವಪ್ಪ ಅವರ ಚಿತ್ರಹಿಂಸೆಯೇ ಕಾರಣ ಎಂದು ಕುದಿಯುತ್ತಿದ್ದಾರೆ.