ಬೆಂಗಳೂರು : ‘ದಿ ಮಾಸ್ಕ್’ ಖ್ಯಾತಿಯ ನಟಿ ಕ್ಯಾಮರೂನ್ ಡಯಾಜ್ ಅವರು ತಾಯಿಯಾದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಕ್ಯಾಮರೂನ್ ಮತ್ತು ಅವರ ಮ್ಯುಸಿಷಿಯನ್ ಪತಿ ಬೆಂಜಿ ಮ್ಯಾಡೆನ್ ತಮ್ಮ ಮಗುವಿನ ಆಗಮನವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ನಟಿ 51 ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ದಂಪತಿ ತಮ್ಮ ಮಗುವಿಗೆ ಕಾರ್ಡಿನಲ್ ಮ್ಯಾಡೆನ್ ಎಂದು ಹೆಸರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮಗನ ಜನನದ ಸುದ್ದಿಯನ್ನು ನೀಡುತ್ತಾ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.