ರಾಜಕೀಯಸುದ್ದಿ

ಸುಮಲತಾ ಬೆಂಬಲ ಸ್ವಾಭಿಮಾನಕ್ಕೋ, ಹೆಚ್​ಡಿಕೆಗೋ ?

ಬೆಂಗಳೂರು : ಸ್ವಾಭಿಮಾನಕ್ಕೋ, ಹೆಚ್​ಡಿಕೆಗೋ, ಅಭ್ಯರ್ಥಿಗೋ ಸುಮಲತಾ ಬೆಂಬಲ ಯಾವುದಕ್ಕೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ. ಮಂಡ್ಯ ಭಾಗದ ಆಪ್ತರು, ಬೆಂಬಲಿಗರ ಜೊತೆ ಮಧ್ಯಾಹ್ನ 2.30 ಕ್ಕೆ ಬೆಂಗಳೂರಿನ ಜೆಪಿ ನಗರದಲ್ಲಿರುವ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಲಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತು ಸುಮಲತಾ ಸ್ಪರ್ಧೆ ನಿರ್ಣಯ ಕೈಗೊಳ್ಳಲಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಟಿಕೆಟ್​ ವಂಚಿತರಾಗಿದ್ದಾರೆ. ಹೀಗಾಗಿ ಆಪ್ತರು ಬೆಂಬಲಿಗರ ಜೊತೆ ಚರ್ಚಿಸಿ  ಸುಮಲತಾ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂಬುದು ತಿಳಿದು ಬಂದಿದೆ.

ಹೆಚ್​ಡಿಕೆ ಸ್ಪರ್ಧೆ ಮಾಡದಿದ್ದರೆ ತಾವೇ ಸ್ಪರ್ಧೆ ಮಾಡುವ ಆಲೋಚನೆಯನ್ನ ಸುಮಲತಾ ಹೊಂದಿದ್ದರು. ಆದರೆ ಈಗ ಕ್ಷೇತ್ರದಲ್ಲಿ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ. ಕುಮಾರಸ್ವಾಮಿ ಬಗ್ಗೆ ಸುಮಲತಾ ಅಂಬರೀಶ್ ಬೆಂಬಲದ ಮಾತನ್ನಾಡಿದ್ದಾರೆ.

ಈ ಮಾತು ಬೆನ್ನೆಲ್ಲೆ ಸುಮಲತಾ ವಿರುದ್ಧ ಸ್ವಾಭಿಮಾನದ ಅಸ್ತ್ರ. ಈ ನಡುವೆ ಮೈತ್ರಿ ಅಭ್ಯರ್ಥಿಗೆ ವಿಜಯೇಂದ್ರ ಬೆಂಬಲ ಕೋರಿದ್ದಾರೆ. ಇನ್ನೂ ಸುಮಲತಾ ಅಂಬರೀಶ್ ಮೇಲೆ ಸಾಫ್ಟ್ ಕಾರ್ನರ್ ತೋರಿ ಅವರ ಬೆಂಬಲ ಪಡೆಯಲು ಹೆಚ್​ಡಿಕೆ ತಂತ್ರವನ್ನೂ ಸಹ ರೂಪಿಸುತ್ತಿದ್ದಾರೆ.

ಇಷ್ಟೆಲ್ಲಾ ಒತ್ತಡ ಇದ್ದರೂ, ತಮ್ಮ ಆಪ್ತರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ಸುಮಲತಾ ನಿರ್ಣಯ ಕೈಗೊಂಡಿದ್ದಾರೆ. ಸದ್ಯ ಸುಮಲತಾ ಅಂಬರೀಶ್ ಹೆಸರಿಲ್ಲ ಬಿಜೆಪಿ ಸ್ಟಾರ್ ಪ್ರಚಾರಕರ ಹೆಸರು ಸಹ ಇದೆ. ಹೀಗಾಗಿ ಸಂಸದೆ ಸುಮಲತಾ ಅಂಬರೀಶ್ ನಡೆ ತೀವ್ರ ಕುತೂಹಲವನ್ನೂ ಸಹ ಮೂಡಿಸಿದೆ.

Comments (0)

Your email address will not be published. Required fields are marked *

Back to top button