ಕ್ರೈಂ ಸ್ಟೋರಿಸುದ್ದಿ

ರೀಲ್ಸ್ ನಲ್ಲಿ ಪರಿಚಯವಾದವನ ಜೊತೆಗೆ ಅತಿಯಾದ ಸಲುಗೆ – ಮುಂದೆ ಆಗಿದ್ದೇನು ಗೊತ್ತಾ?

ಬೆಂಗಳೂರು : ಗಂಡ ಬಿಟ್ಟು ಮಕ್ಕಳ ಜೊತೆಗೆ ಮಹಿಳೆಯೊಬ್ಬಳು ವಾಸವಿದ್ದಳು. ರೀಲ್ಸ್ ನಲ್ಲಿ ಪರಿಚಯವಾದವನ ಜೊತೆಗೆ ಅತಿಯಾದ ಸಲುಗೆ ಇಟ್ಟುಕೊಂಡಿದ್ದಳು.ಆತ ಮದುವೆ ಆಗ್ತೀನಿ ಅಂತಾನು  ನಂಬಿಸಿದ್ದ. ಆದರೆ ಈಗ ಆ ನಂಬಿಕೆಯೇ ಮೋಸವಾಗಿದೆ.

2019 ರಲ್ಲಿ ರಾಧಿಕಾಗೆ ರೀಲ್ಸ್ ನಲ್ಲಿ ತಮಿಳುನಾಡು ಮೂಲದ ಪರಮಶಿವಮ್ ಪರಿಚಯವಾಗಿತ್ತು. ಮದುವೆ ಆಗ್ತೀನಿ ಎಂದು ಪರಮಶಿವಮ್ ಆಕೆಯನ್ನ ನಂಬಿಸಿದ್ದ. ಕಾರು ಖರೀದಿಸಿ ಕಂಪನಿಗೆ ಬಿಟ್ಟರೆ ಒಳ್ಳೆ ಹಣ ಬರುತ್ತೆ ಎಂದು ನಂಬಿಸಿ, ರಾಧಿಕಾ ಬಳಿಯಿಂದ ಹಂತ ಹಂತವಾಗಿ 6 ಲಕ್ಷ ಪಡೆದಿದ್ದ. ಹಣ ಪಡೆದು ತಮಿಳುನಾಡಿಗೆ ಹೋದವನು ವಾಪಸ್ಸು ಆಗಲೇ ಇಲ್ಲ.

ತಮಿಳುನಾಡಿನಲ್ಲಿ ಪರಮಶಿವಮ್ ಬೇರೊಂದು ಮದುವೆ ಆಗಿರೋದು ಕೂಡ ಬೆಳಕಿಗೆ ಬಂದಿದೆ. ಮೋಸ ಆಗಿರೋದು ಗೊತ್ತಾಗಿ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ರಾಧಿಕಾ ದೂರು ನೀಡಿದ್ದಳು. ಪೊಲೀಸ್ ಠಾಣೆಗೆ ಒಂದು ವರ್ಷ ಅಲೆದರು ನ್ಯಾಯ ಸಿಗ್ತಿಲ್ಲ ಎಂದು ರಾಮಮೂರ್ತಿನಗರ ಪೊಲೀಸರ ಮೇಲೆ ರಾಧಿಕಾ ಆರೋಪಿಸಿದ್ದಾರೆ.

ಪರಮಶಿವಮ್ ಹಾಗೂ ತಂಡದಿಂದ ರಾಧಿಕಾ ಬಗ್ಗೆ ರೀಲ್ಸ್ ಮಾಡಿ‌ ನಿಂದನೆ ಮಾಡಲಾಗುತ್ತಿತ್ತು ಹಾಗಾಗಿ ರಾಧಿಕಾ ಆರು ಜನರ ಮೇಲೆ ಎಫ್ಐಆರ್ ದಾಖಲಿಸಿದ್ದರು. ಆದರೆ ಇದುವರೆಗೂ ಆಕೆಗೆ ನ್ಯಾಯ ಸಿಕ್ಕಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.

Comments (0)

Your email address will not be published. Required fields are marked *

Back to top button