ಬೆಂಗಳೂರು : ಪ್ರತಿ ಎರಡು ದಿನಕ್ಕೆ ರಾಜ್ಯದಲ್ಲಿ ಮೂರು ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಹೆಣ್ಣುಮಕ್ಕಳಿಗೆ ಕರ್ನಾಟಕ ಸುರಕ್ಷಿತವೇ ಚರ್ಚೆಯನ್ನು ಹುಟ್ಟುಹಾಕಿದೆ. ಕರ್ನಾಟಕ ರಾಜ್ಯ ಪೊಲೀಸ್ 2024ರ ಜನವರಿ ತಿಂಗಳ ಕ್ರೈಮ್ ರಿವ್ಯೂ ವರದಿಯನ್ನು ಪ್ರಕಟ ಮಾಡಿದ್ದು, ಜನವರಿಯೊಂದರಲ್ಲೇ ಕರ್ನಾಟಕದಲ್ಲಿ ಮಹಿಳೆಯರ ಮೇಲೆ 1596 ಅಪರಾಧ ಕೃತ್ಯಗಳು ನಡೆದಿವೆ ಎಂದು ವರದಿ ತಿಳಿಸಿದೆ.
ಪ್ರತಿ ಎರಡು ದಿನಕ್ಕೊಮ್ಮೆ ರಾಜ್ಯದಲ್ಲಿ 3 ರೇಪ್ ಕೇಸ್‌ಗಳು ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಒಂದೇ ತಿಂಗಳಲ್ಲಿ ಮಹಿಳೆಯರ ಮೇಲೆ 1500ಕ್ಕೂ ಅಧಿಕ ಅಪರಾಧ ಘಟನೆಗಳು ವರದಿಯಾಗಿವೆ. ಜನವರಿ ತಿಂಗಳಲ್ಲಿ ದಾಖಲಾದ 50 ರೇಪ್‌ಗಳ ಪೈಕಿ, ಒಂದು ಕಸ್ಟೋಡಿಯಲ್ ರೇಪ್ ಕೇಸ್ ಆಗಿದ್ದರೆ, ಎರಡು ಗ್ಯಾಂಗ್‌ರೇಪ್ ಕೇಸ್‌ಗಳಾಗಿವೆ.
ಉಳಿದ 47 ಕೇಸ್‌ಗಳು, ಇತರ ಮಾದರಿಯ ರೇಪ್ ಕೇಸ್‌ಗಳು ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷದ ಜನವರಿಗೆ ಹೋಲಿಸಿದರೆ, ಈ ವರ್ಷದ ಜನವರಿಯಲ್ಲಿ ರೇಪ್ ಕೇಸ್‌ಗಳ ಸಂಖ್ಯೆಯಲ್ಲಿ ಶೇ.72ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಜನವರಿಯಲ್ಲಿ ಒಟ್ಟು 29 ಅತ್ಯಾಚಾರ ಕೇಸ್‌ಗಳು ದಾಖಲಾಗಿದ್ದರೆ, ಈ ವರ್ಷ 50ರ ಗಡಿ ಮುಟ್ಟಿದೆ.