Friday, January 30, 2026
17.8 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಸ್ಪಾ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ - 25 ಬಾರಿ ಚುಚ್ಚಿ ಕೊಂದ ಪಾಪಿ !

ಸ್ಪಾ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ – 25 ಬಾರಿ ಚುಚ್ಚಿ ಕೊಂದ ಪಾಪಿ !

ಬೆಂಗಳೂರು : ಜಯನಗರದಲ್ಲಿ ಫರಿದಾ ಖಾತೂನ್ ಕೊಲೆ ಪ್ರಕರಣ ಜಯನಗರ ಪೊಲೀಸ್ ಠಾಣೆಗೆ ಬಂದು ಆರೋಪಿ ಗಿರೀಶ್ @ ರೆಹಾನ್ ಶರಣಾಗಿದ್ದಾನೆ. ಪೊಲೀಸರ ಎದುರು ಆರೋಪಿ ಕೊಲೆಯ ರಹಸ್ಯ ರಿವೀಲ್ ಮಾಡಿದ್ದಾನೆ. 25 ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಿರುವಂತಹ ಘಟನೆ ನಡೆದಿದೆ.

ಫರಿದಾಗೆ 42 ವರ್ಷ ಗಿರೀಶ್ ಗೆ 32 ವರ್ಷ ವಯಸ್ಸು 2022 ರಲ್ಲಿ ಗಿರೀಶ್ ಗೆ ಪರಿಚಯವಾಗಿದ್ದ ಮಹಿಳೆ ಫರಿದಾ ಸ್ಪಾ‌ ನಲ್ಲಿ‌ ಕೆಲಸ ಮಾಡುತ್ತಿದ್ದಳು. ಗಿರೀಶ್ ತಂದೆ ಬ್ಯಾಂಕ್ ವೊಂದರಲ್ಲಿ ಕ್ಯಾಶಿಯರ್ ಆಗಿದ್ರು. ಸ್ಪೇರ್ ಡ್ರೈವರ್ ಆಗಿ ಗಿರೀಶ್​ ಕೆಲಸ ಮಾಡಿಕೊಂಡಿದ್ದರು. ಮೂಲತಃ ಬೆಂಗಳೂರು ಯಡಿಯೂರು ನಿವಾಸಿ ಗಿರೀಶ್ ಬೆಗಳೂರಲ್ಲಿ ಸ್ವಂತ ಮನೆ ಕೂಡ ಇದ್ದು, ಆರ್ಥಿಕವಾಗಿ ಚನ್ನಾಗಿಯೇ ಇದ್ದ.

2022 ರಲ್ಲಿ ಮಸಾಜ್ ಮಾಡಿಸಲು ಹೋದಾಗ ಮಹಿಳೆಯ ಪರಿಚಯ ಆಗಿದ್ದಳು. ಅಂದಿನಿಂದ ಆರೋಪಿ ಗಿರೀಶ್ ಮಹಿಳೆಯ ಸಂಪರ್ಕ ಬೆಳೆಸಿದ್ದ. ಪರಿಚಯ ಪ್ರೀತಿಗೆ ತಿರುಗಿ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಫರಿದಾಗೆ ಮದುವೆಯಾಗಿ ಗಂಡನ ಜೊತೆಗೆ ಡಿವೋರ್ಸ್ ಆಗಿತ್ತು. ಡಿವೋರ್ಸ್ ಬಳಿಕ 2014 ರಲ್ಲಿ ಗಂಡ ಮೃತಪಟ್ಟಿದ್ದ. ಕೊಲ್ಕತ್ತಾದಿಂದ ಬಂದು ಬೆಂಗಳೂರಲ್ಲಿ ಫರೀದಾ ವಾಸವಿದ್ದಳು.

ಫರಿದಾಗೆ 22 ವರ್ಷದ ಮಗಳು ಕೂಡ ಇದ್ದಾಳೆ. ಇನ್ನು ಫರಿದಾಳನ್ನು ಮದುವೆಯಾಗುವಂತೆ ಗಿರೀಶ್ ಪಟ್ಟು ಹಿಡಿದಿದ್ದ. ಆದರೆ ಮದುವೆಯಾಗಲು ಫರಿದಾ ನಿರಾಕರಿಸಿದ್ದಳು. ಇದೇ ತಿಂಗಳು 6 ರಂದು ಫರಿದಾ ಹಾಗೂ ಮಗಳು ಕೊಲ್ಕತ್ತಾಗೆ ತೆರಳಿದ್ದರು. 29 ರಂದು ಗಿರೀಶ್​ನ ಹುಟ್ಟುಹಬ್ಬ ಇತ್ತು. ಅಲ್ಲದೇ ಮಗಳಿಗೆ ಕಾಲೇಜಿನಲ್ಲಿ ಅಡ್ಮಿಶನ್ ಕೂಡ ಮಾಡೋದು ಇರತ್ತೆ. ಹಾಗಾಗಿ ಫ್ಲೈಟ್ ನಲ್ಲಿ 28 ರಂದು ಫರಿದಾ ಬೆಂಗಳೂರಿಗೆ ಆಗಮಿಸಿದ್ದಳು.

29 ರಂದು ಹುಟ್ಟುಹಬ್ಬದ ಸಂಭ್ರಮಾಚರಣೆ ಕೂಡ ಮುಗಿಸಿದ್ರು. ಜೆಪಿ‌ ನಗರದ ಓಯೋ ರೂಂ ನಲ್ಲಿ ವಾಸವಿದ್ರು. ಕೊಲ್ಕತ್ತಾದಲ್ಲಿದ್ದಾಗ ಗಿರೀಶ್​ಗೆ ಸುಳ್ಳು ಹೇಳಿ ಫರಿದಾ ಬೇರೆ ಕಡೆ ತೆರಳಿದ್ಲಂತೆ. ಸ್ನೇಹಿತೆ ಜೊತೆಗೆ ಫರೀದಾ ಬೇರೆ ಕೆಲಸಕ್ಕೆ ತೆರಳಿದ್ದಳು. ಸ್ನೇಹಿತೆ ಗಂಡನಿಗೆ ಕರೆ ಮಾಡಿ ಫರಿದಾಳನ್ನ ನಿನ್ನ ಪತ್ನಿ‌ ಹಾಳು ಮಾಡ್ತಿದ್ದಾಳೆ ಎಂದು ಬೈದಿದ್ದ. ಆದರೆ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಎಲ್ಲಾ ಮರೆತಿದ್ದ.

ಮಾರ್ಚ್ 30 ರಂದು ಕೂಡ ಫರಿದಾಳನ್ನು ಕರೆದುಕೊಂಡು ಶಾಲಿನಿ‌ ಗ್ರೌಂಡ್​ಗೆ ಬಂದಿದ್ದ. ಆಕೆಯನ್ನ ಕೊಲೆ ಮಾಡಲೇಬೇಕು ಎಂದು ನಿರ್ಧರಿಸಿ ಚಾಕು ಖರೀದಿಸಿದ್ದ. ನಾವು ಮದುವೆ ಆಗೋಣ, ಈ ಕೆಲಸ ಎಲ್ಲಾ ಬಿಡು ಎಂದು ಕೇಳಿಕೊಂಡಿದ್ದ. ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಅಲ್ಲದೆ ದೇಹದ ವಿವಿಧೆಡೆ 25 ಕ್ಕೂ ಹೆಚ್ಚು ಬಾರಿ ಇರಿದಿದ್ದ ಚಾಕುವಿನಿಂದ ಇರಿದಿದ್ದ. ಆತನ ಕೋಪಕ್ಕೆ ಫರಿದಾ ಕರಳು ಕೂಡ ಆಚೆ ಬಂದಿತ್ತು. ಕೊಲೆ ಬಳಿಕ‌ ಆತನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments