Friday, September 12, 2025
22.5 C
Bengaluru
Google search engine
LIVE
ಮನೆUncategorizedಹುಡುಗಿ ಫುಲ್​ ಟೈಟ್​ - ಮಿಡ್​ನೈಟ್​ ಹೈಡ್ರಾಮಾ !

ಹುಡುಗಿ ಫುಲ್​ ಟೈಟ್​ – ಮಿಡ್​ನೈಟ್​ ಹೈಡ್ರಾಮಾ !

ಬೆಂಗಳೂರು : ಮಾನ ಮುಚ್ಚುವಷ್ಟೇ ಬಟ್ಟೆ ಧರಿಸಿದ್ದ ಯುವತಿ ಕುಡಿದು ತೂರಾಡುತ್ತ ನಡು ರಸ್ತೆಯಲ್ಲೇ ರಿಕ್ಷಾ ಚಾಲಕನಿಗೆ ಥಳಿಸಿದ್ದಾಳೆ. ಪರಿಪರಿಯಾಗಿ ಆಕೆಗೆ ಬುದ್ಧಿ ಹೇಳಿ ತಡೆಯಲು ಯತ್ನಿಸಿದರೂ ಆಕೆ ನಿಲ್ಲಿಸಿಲ್ಲ. ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಯುವತಿಯೊಬ್ಬಳು ಸಾರ್ವಜನಿಕವಾಗಿ ಕೋಲಾಹಲ ಸೃಷ್ಟಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತುಂಡುಡುಗೆ ಧರಿಸಿದ್ದ ಹಾಗೂ ಕುಡಿದು ಟೈಟ್ ಆಗಿದ್ದ ಈಕೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದಳು. ಆಕೆಗೆ ಪ್ರಶ್ನಿಸಿದ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಳೆ. ಆಟೋ ಡ್ರೈವರ್ ನಿಶಾಂತ್ ಎಂಬವರು  ಹಲ್ಲೆಗೊಳಗಾದ ವ್ಯಕ್ತಿ ವ್ಯಕ್ತಿಯಾಗಿದ್ದಾರೆ. ಪರಿಪರಿಯಾಗಿ ಆಕೆಗೆ ಬುದ್ಧಿ ಹೇಳಿ ತಡೆಯಲು ಯತ್ನಿಸಿದರೂ ಆಕೆ ನಿಲ್ಲಿಸಿಲ್ಲ. ಕಂಠ ಪೂರ್ತಿ ಕುಡಿದು ರಸ್ತೆ ಮಧ್ಯೆ ಅಡ್ಡಾದಿಡ್ಡಿ ಕಾರ್ ಓಡಿಸುತ್ತ ಬಂದ ಯುವತಿಗೆ.

ಸರಿಯಾಗಿ ಚಲಾಯಿಸುವಂತೆ ಆಟೋ ಡ್ರೈವರ್‌ ಬುದ್ಧಿ ಹೇಳಿದ್ದಾನೆ. ಇದರಿಂದ ರೇಗಿ ಬಾಯಿಗೆ ಬಂದಂತೆ ಬೈದಿರುವ ಯುವತಿ, ಕಾರ್ ನಿಲ್ಲಿಸಿ ಆಟೋ ಅಡ್ಡಗಟ್ಟಿ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾಳೆ. ಆಟೋ ಚಾಲಕನ ಕೆನ್ನೆಗೆ ಬಾರಿಸಿ, ಮೈಕೈ ಪರಚಿ ಗಾಯಪಡಿಸಿರುವ ಯುವತಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈಕೆಯ ವರ್ತನೆ ದಾರಿಹೋಕರ ವಿಡಿಯೋದಲ್ಲಿ ದಾಖಲಾಗಿದೆ. ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುತ್ತಿರುವುದು ಪೊಲೀಸರಿಗೆ ತಲೆನೋವಾಗಿದೆ. ಹೈಫೈ ಸೊಸೈಟಿಯ ಯುವಕ/ಯುವತಿಯರು ಕಂಠಪೂರ್ತಿ ಕುಡಿದು ರಸ್ತೆಗೆ ಬಂದು ಅಡ್ಡಾದಿಡ್ಡಿ ಕಾರು-ಬೈಕು ಚಲಾಯಿಸುತ್ತ ನ್ಯೂಸೆನ್ಸ್‌ ಸೃಷ್ಟಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಫ್ಯಾಶನ್‌ ಡಿಸೈನರ್‌ ಪ್ರಸಾದ ಬೀಡಪ್ಪ ಪುತ್ರ ಆಡಂ ಬೀಡಪ್ಪ ಇದೇ ರೀತಿ ಡ್ರಾಮಾ ಸೃಷ್ಟಿಸಿ ಸುದ್ದಿಯಾಗಿದ್ದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments