ಸಿನಿಮಾಸುದ್ದಿ

ಅಶ್ವಿನಿ ಪುನೀತ್‌ರನ್ನು‌ ನಿಂದಿಸಿದವರಿಗೆ ಶಾಕ್ ಕೊಟ್ಟ ಸಿಎಂ!

ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಡಾ.ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಆಕ್ಷೇಪಾರ್ಹ ಹೇಳಿಕೆ ಕುರಿತು ತೀವ್ರ ಚರ್ಚೆಯಾಗುತ್ತಿದೆ.

ಐಪಿಎಲ್ ನಲ್ಲಿ ಆರ್ ಸಿಬಿಯ ಸತತ ಸೋಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣ. ಅವರನ್ನು ಆರ್ ಸಿಬಿ ಈವೆಂಟ್ ಗೆ ಕರೆಸಬಾರದಿತ್ತು ಎನ್ನುವ ಕೀಳುಮಟ್ಟದ ಪೋಸ್ಟ್ ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಗಜಪಡೆ ಎಂಬ ಅಕೌಂಟ್​ನಿಂದ ಈ ಫೋಸ್ಟ್ ಮಾಡಲಾಗಿದ್ದು, ಸಾರ್ವಜನಿಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಟೀಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡಾ ಕಿಡಿಗೇಡಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

Comments (0)

Your email address will not be published. Required fields are marked *

Back to top button