ತುಮಕೂರು: ಭೀಕರ ಬರಗಾಲದಿಂದ ಮಳೆ ಬೆಳೆ ಇಲ್ಲದೆ ಜಾನುವಾರಗಳಿಗೆ ಮೇವು ಇಲ್ಲದೆ ಅಹಹಾಕಾರ ಸೃಷ್ಟಿ ಯಾಗಿರುವ ಕಾರಣ. ಈಗಾಗಲೇ ರಾಜ್ಯ ಸರ್ಕಾರವು ಕೊರಟಗೆರೆ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು. ಜಿಲ್ಲಾಧಿಕಾರಿಗಳ ಆದೇಶದಂತೆ ಈಗಾಗಲೇ ಬುಕ್ಕಾಪಟ್ಟಣ ಗ್ರಾಮದ ದೊಡ್ಡಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಮೇವು ಬ್ಯಾಂಕ್ ಪ್ರಾರಂಭವಾಗಿದು ಅಲ್ಲಿನ ಸುತ್ತಮುತ್ತ ಗ್ರಾಮಗಳ ರೈತರು ಜಾನುವಾರುಗಳಿಗೆ ಮೇವನ್ನು ಪಡೆದುಕೊಳ್ಳುತ್ತಿದ್ದಾರೆ.
ಇದೀಗ ಹೊಳವನಹಳ್ಳಿಯ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಮತ್ತೊಂದು ಮೇವು ಬ್ಯಾಂಕ್ ಇಂದಿನಿಂದ ಪ್ರಾರಂಭವಾಗಿದು ಇಲ್ಲಿನ ರೈತರು ಹಾಗೂ ಸುತ್ತಮುತ್ತ ಹಳ್ಳಿಗಳ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಮದುಗಿರಿ ಉಪ ವಿಭಾಗಾಧಿಕಾರಿ ಗುಟ್ಟೂರು ಶಿವಪ್ಪ ತಿಳಿಸಿದರು.
ತುಮಕೂರು ಪಶುಪಾಲನ ಉಪನಿರ್ದೇಶಕರಾದ ಡಾಕ್ಟರ್ ಜಿ ಗಿರೀಶ್ ಬಾಬು ರೆಡ್ಡಿ ಮಾತನಾಡಿ. ರಾಜ್ಯ ಸರ್ಕಾರದ ಆದೇಶದಂತೆ ಬರಗಾಲ ಪಿಡಿತ ಪ್ರದೇಶವಾದ ನಮ್ಮ ಕೊರಟಗೆರೆ ತಾಲೂಕಿನ ಜಾನುವಾರಗಳನ್ನು ಹೊಂದಿರುವ ಪ್ರತಿಯೊಬ್ಬ ರೈತರಿಗೂ ಮೇವಿನ ಸಮಸ್ಯೆ ಉಂಟಾಗಿದ್ದು ಈಗಾಗಲೇ ಮೇವು ಬ್ಯಾಂಕ್ ತೆರೆಯಲಾಗಿದೆ ಒಂದು ವಾರಕ್ಕೆ ಆಗುವಷ್ಟು ಮೇವನು ಒಂದೇ ಬಾರಿ ರೈತರು ತೆಗೆದುಕೊಂಡು ಹೋಗಬಹುದು.
ಪ್ರತಿಯೊಬ್ಬ ರೈತರು ಪಶು ಆಸ್ಪತ್ರೆಯಲ್ಲಿ ಮೇವು ವಿತರಣೆಯ ಕಾರ್ಡನ್ನು ಪಡೆದು ಮೇವು ವಿತರಿಸುವ ಸ್ಥಳದಲ್ಲಿ ಪ್ರತಿ ಕೆಜಿಗೆ 2 ರೂ ನಂತೆ ಹಣವನ್ನು ಪಾವತಿಸಿ ಒಂದು ಜನುವರಿಗೆ 6 ಕೆಜಿವರೆಗೆ ಮೇವನ್ನ ಪಡೆಯಬಹುದು ಎಂದು ತಿಳಿಸಿದರು.
ತಹಶೀಲ್ದಾರ್ ಮಂಜುನಾಥ್ ಮಾತನಾಡಿ. ಮನುಷ್ಯನಿಗೆ ಆಹಾರವು ಎಷ್ಟು ಮುಖ್ಯವೋ ಅದೇ ರೀತಿ ಜಾನುವಾರಗಳಿಗೆ ಮೇವು ಅಷ್ಟೇ ಮುಖ್ಯವಾಗಿರುತ್ತದೆ ಆದ್ದರಿಂದ ಪ್ರತಿ ಜಾನುವಾರಿಗೆ 6 ಕೆಜಿಯಂತೆ ಮೇವನ್ನ ನೀಡಲಾಗುತ್ತಿದೆ ತಾಲೂಕಿನಲ್ಲಿ ಅಂತವಾಗಿ ಮೇವು ಬ್ಯಾಂಕ್ ತೆರೆಯಲಾಗುತ್ತಿದೆ ರೈತರು ಯಾವುದೇ ಆತಂಕ ಪಡದೆ ತಮ್ಮ ಬಳಿ ಇರುವ ಜಾನುವಾರಗಳ ಪಟ್ಟಿಯನ್ನು ಪಶು ಇಲಾಖೆಯಲ್ಲಿ ನೀಡಿ ಮೇವು ಕಾರ್ಡ್ ಪಡೆದು ಮೇವನ್ನು ತೆಗೆದುಕೊಂಡು ಹೋಗಬಹುದು. ನೀರಾವರಿ ಹೊಂದಿರುವ ರೈತರಿಗೆ ಈಗಾಗಲೇ ಮೇವಿಗಾಗಿ ಬಿತ್ತನೆ ಬೀಜವನ್ನು ನೀಡಲಾಗಿದೆ ನೀರಾವರಿ ಇಲ್ಲದ ರೈತರು ಮೇವು ಬ್ಯಾಂಕ್ ನಲ್ಲಿ ಮೇವು ಪಡೆಯಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊರಟಗೆರೆ ಪಶು ಆಸ್ಪತ್ರೆಯ ಅಧಿಕಾರಿ ನಾಗಭೂಷಣ್, ಕಂದಾಯ ಇಲಾಖೆಯ ಅಧಿಕಾರಿಗಳು, ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ರೈತರು ಹಾಜರಿದ್ದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com