ಬೆಂಗಳೂರು: ಹಿರಿಯ ಪತ್ರಕರ್ತ, ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ಅವರಿಗೆ ಹೃದಯಾಘಾತವಾಗಿದೆ. 57 ವರ್ಷದ ವಿಶ್ವೇಶ್ವರ್ ಭಟ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ವೇಶ್ವರ್ ಭಟ್‌ಗೆ ಹೃದಯಾಘಾತವಾದ ವಿಚಾರ ತಿಳಿದು ಅಭಿಮಾನಿ ಬಳಗ, ಶಿಷ್ಯವೃಂದ ಮತ್ತು ಅಪಾರ ಓದುಗ ಬಳಗ ಆತಂಕಗೊಂಡಿದೆ.
ಆದರೆ, ತಜ್ಞ ವೈದ್ಯರ ಸಕಾಲಿಕ ಚಿಕಿತ್ಸೆ ಕಾರಣ ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಪತ್ರಕರ್ತ ಚಿರು ಭಟ್ ಆಸ್ಪತ್ರೆಗೆ ಭೇಟಿ ನೀಡಿ ವಿಶ್ವೇಶ್ವರ್ ಭಟ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಮುಂದಿನವಾರದಿಂದ ಓದುಗರಿಗೆ ಲಭ್ಯ ಆಗುವುದಾಗಿ ಚಿರುಭಟ್ ಮೂಲಕ ವಿಶ್ವೇಶ್ವರ ಭಟ್ ಸಂದೇಶ ರವಾನಿಸಿದ್ದಾರೆ.
ಇನ್ನು ಆಸ್ಪತ್ರೆಯಿಂದಲೇ ತಮ್ಮ ಓದುಗರಿಗೆ ನಾನು ಆರೋಗ್ಯವಾಗಿದ್ದೇನೆ ಅಂತ ಸಂದೇಶ ನೀಡಿದ್ದಾರೆ. ”ಇವೆಲ್ಲಾ ಇದ್ದಿದ್ದೆ.. ಬನ್ನಿ ಒಂದು ಸುಂದರ ದೃಶ್ಯವನ್ನ ಆಸ್ವಾಧಿಸೋಣ” ಅಂತ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com