ಬಹುಭಾಷಾ ನಟಿ ಭಾಮಾ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿರುವ ಬಗ್ಗೆ ಖಚಿತಪಡಿಸಿದ್ದಾರೆ. ಇತ್ತೀಚಿಗೆ ಪತಿಯಿಂದ ದೂರವಿದ್ದ ನಟಿ ಭಾಮಾ, ಇದೀಗ ಪತಿಯಿಂದ ಸಂಪೂರ್ಣ ದೂರವಾಗಿರುವ ಬಗ್ಗೆ ಅಧೀಕೃತವಾಗಿ ತಿಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗುವಿನ ಜೊತೆಗಿರುವ ಫೋಟೋ ಹಂಚಿಕೊಂಡಿರುವ ನಟಿ ಭಾಮಾ, ‘ನಾನು ಎಷ್ಟು ಬಲಶಾಲಿ ಎಂದು ನನಗೆ ತಿಳಿದಿರಲಿಲ್ಲ. ನಾನು ಸಿಂಗಲ್ ಮದರ್ ಆಗುವವರೆಗೂ ಇದು ಗೊತ್ತಿರಲಿಲ್ಲ. ಸ್ಟ್ರಾಂಗ್ ಆಗಿರುವುದು ಸದ್ಯದ ನನ್ನ ಏಕೈಕ ಆಯ್ಕೆಯಾಗಿದೆ. ಮೀ ಆ್ಯಂಡ್ ಮೈ ಗರ್ಲ್’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಟಿವಿ ನಿರೂಪಕಿಯಾಗಿ ತೆರೆ ಮೇಲೆ ಬಂದ ನಟಿ ಭಾಮಾ ಕುರುಪ್, ನಿರ್ದೇಶಕ ಲೋಹಿತ್ ದಾಸ್ ಅವರ ನಿವೇದ್ಯಂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಮಾಲಿವುಡ್‌ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹಾಗೂ ಜನಪ್ರಿಯತೆ ಪಡೆದಿರುವ ನಟಿ ಭಾಮಾ , ಕನ್ನಡ ಚಿತ್ರರಂಗದಲ್ಲಿಯೂ ಮಿಂಚಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಮೊದಲಾ ಸಲ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶೈಲೂ ಹಾಗೂ ಮಿತ್ರ ಅವರ ರಾಗ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಭಾಮಾ ಕುರುಪ್ ಅವರು ನಾಲ್ಕು ವರ್ಷದ ಹಿಂದೆ 2020ರಲ್ಲಿ ಉದ್ಯಮಿ ಅರುಣ್ ಜಗದೀಶ್ ಎನ್ನುವರನ್ನು ವಿವಾಹವಾಗಿದ್ದರು. ಮದುವೆ ಬಳಿಕ ಭಾಮಾ ನಟನೆ ತೊರೆದು ಪತಿಯೊಂದಿಗೆ ಉದ್ಯಮಕ್ಕಿಳಿಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇನ್ನು ಇತ್ತೀಚಿಗೆ ನಟಿ ಭಾಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿದ್ದ ಪತಿಯ ಫೋಟೋಗಳನ್ನು ತೆಗೆದು ಹಾಕಿದ್ದರು. ಅಲ್ಲದೇ ತಮ್ಮದೇ ಉದ್ಯಮ ಆರಂಭಿಸಿದ್ದರು. ಇದೀಗ ಪತಿಯಿಂದ ದೂರಾದ ಬಗ್ಗೆ ನಟಿ ಭಾಮಾ ಕುರುಪ್ ಅಧೀಕೃತವಾಗಿ ತಿಳಿಸಿದ್ದಾರೆ.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com