Top Newsಜನಸಾಮಾನ್ಯರ ದನಿ

ಯಲಹಂಕದಲ್ಲಿ ಫ್ರೀಡಂಟಿವಿ ಎಕ್ಸ್ ಪೋ.. ಇಂದೇ ಕೊನೆ ದಿನ ಬರೋದು ಮಿಸ್ ಮಾಡ್ಬೇಡಿ

ಮೂರು ದಿನಗಳಿಂದ ಬೆಂಗಳೂರಿನ ಯಲಹಂಕದ ವಿವೇಕಾನಂದ ಆಟದ ಮೈದಾನದಲ್ಲಿ ಫ್ರೀಡಂ ಟಿವಿ ವೀರವನಿತೆ ಅವಾರ್ಡ್ಸ್ ಮತ್ತು ಎಕ್ಸ್ ಪೋ ಭರ್ಜರಿಯಾಗಿ ನಡೀತಿದೆ..

ಅಂತಿಮ ದಿನವಾದ ಇಂದು ಸಂಜೆ ಮಹಿಳಾ ಸಾಧಕಿಯರಿಗೆ ಫ್ರೀಡಂಟಿವಿ ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.. ಸಚಿವರಾದ ಬೈರತಿ ಸುರೇಶ್​, ಜನಪ್ರಿಯ ಶಾಸಕ ಎಸ್ ಆರ್ ವಿಶ್ವನಾಥ್​, ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ, ಮಾಜಿ ಮೇಯರ್ ಪದ್ಮಾವತಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ನೀವು ಜೊತೆಯಾಗಿ ನಮ್ಮೊಂದಿಗೆ..

ಇಂದು ಕೂಡ ಎಕ್ಸ್ ಪೋದಲ್ಲಿ ಸಾಕಷ್ಟು ಫನ್ ಗೇಮ್ಸ್ ಇರುತ್ತವೆ.. ನೀವು ಭಾಗವಹಿಸಬಹುದು. ಫ್ರೀಡಂ ಟಿವಿ ಎಕ್ಸ್​ ಪೋ ಪರಿಸರ ಪ್ರೇಮಿಗಳಿಗೂ ಇಷ್ಟೇ ಆಗೇ ಆಗುತ್ತದೆ. ಏಕಂದ್ರೆ, ಮಣ್ಣು, ಬಿದಿರಿನಿಂದ ಮಾಡಿರುವಂತ ಗೃಹೋಪಯೋಗಿ ಪಾತ್ರೆಗಳೂ ಸಿಗುತ್ತಿವೆ.

ವಾಹನಗಳ ವಿಚಾರಕ್ಕೆ ಬಂದ್ರೆ, ಕೇವಲ 95 ಸಾವಿರಕ್ಕೆ ಎಲೆಕ್ಟ್ರಿಕ್ ವೆಹಿಕಲ್ ಲಭ್ಯವಿದೆ. ಟಯೋಟಾ, ಟಾಟಾ, ಸ್ಪೋರ್ಟ್ ಯಾವುದೇ ಬ್ರಾಂಡ್ ಆಗಿರಬಹುದು. ಪೆಟ್ರೋಲ್, ಡೀಸೆಲ್​, ಎಲೆಕ್ಟ್ರಿಕ್ ಕಾರುಗಳು, ಸ್ಕೂಟಿ, ಬೈಕ್​ಗಳನ್ನು ಕೊಂಡು ಕೊಳ್ಳಲು ಮುಕ್ತ ಅವಕಾಶವಿದೆ. ಶೋ ರೂಮ್​ಗೆ ಹೋಗಿ ಹುಡುಕಿ ಹುಡುಕಿ ಖರೀದಿಸುವ ಬದಲು.. ಒಂದೇ ವೇದಿಕೆಯಲ್ಲಿ ನಿಮಗಿಷ್ಟವಾದ ಬ್ರಾಂಡೆಂಡ್ ವಾಹನಗಳು ಸಿಗುತ್ತಿವೆ.

ಫಸ್ಟ್ ಲರ್ನರ್ಸ್, ಕಲಿಕಾ ಹಂತದಲ್ಲಿರುವ ಮಕ್ಕಳಿಗಾಗಿ ಶಾಪಿಂಗ್ ಮಾಡಲು ಫ್ರೀಡಂ ಟಿವಿ ಎಕ್ಸ್​ ಪೋ ಹೇಳಿ ಮಾಡಿಸಿದಂತಿದೆ. ಬಗೆ ಬಗೆಯ ಪುಸ್ತಕಗಳು, ಕಾಗುಣಿತ ಬುಕ್ಸ್, ಮಲ್ಟಿ ಪರ್ಸಸ್​​ ಬುಕ್ಸ್, 1 ಲಕ್ಷ ಬಾರಿ ಆದ್ರೂ ನಿರಾತಂಕವಾಗಿ ಅಳಿಸಿ ಬರೆಯಬಹುದಾದ ಬುಕ್ಸ್, ಹ್ಯಾಂಡ್ ರೈಟಿಂಗ್ ಇಂಪ್ರೂವ್ ಮಾಡಿಕೊಳ್ಳಲು ಬೇಕಾದ ಪುಸ್ತಕಗಳು, ಪೆನ್ಸಿಲ್​, ಪೆನ್ಗಳಿಲ್ಲದೇಯೂ ಬರೆಯಬಹುದಾದ ವೆರೈಟಿ ಬುಕ್ಸ್​​ಗಳು ಸಿಗುತ್ತಿವೆ.

ಕುರುಕಲು ಪ್ರಿಯರು ಕೂಡ ಫ್ರೀಡಂ ಟಿವಿ ಎಕ್ಸ್​ ಪೋಗೆ ಬಂದ್ರೆ, ಬಾಯಿ ರುಚಿ ತಣಿಸಿಕೊಂಡು ಹೋಗಬಹುದು. ಉತ್ತರ ಕರ್ನಾಟಕ ಶೈಲಿಯ ತಿನಿಸುಗಳು, ಉಪ್ಪಿನಕಾಯಿ, ಚುಮು ಚುಮು ಚಳಿಗೆ ಸ್ಪೈಸಿ ಸ್ನ್ಯಾಕ್ಸ್ ಹೀಗೆ ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ಸವಿಯುತ್ತಾ, ಚುಮು ಚುಮು ಚಳಿಯಲ್ಲಿ ಸಖತ್ ಎಂಜಾಯ್ ಮಾಡಬಹುದು.

ಹೊರಗೆ ಬಂದ್ರೆ ಮಕ್ಕಳು ಅಳ್ತಾರೆ.. ಅವರನ್ನ ಸುಧಾರಿಸೋದೆ ಒಂದು ಕೆಲಸ ಆಗುತ್ತೆ ಅಂತಾ ಮಹಿಳೆಯರು ವರಿ ಮಾಡ್ಕೋಬೇಡಿ. ನಿಮ್ಮ ಮಕ್ಕಳಿಗಾಗಿಯೂ ಗೇಮ್ಸ್​​ ಆಯೋಜಿಸಲಾಗಿದೆ. ಗೇಮ್ ಆಡುತ್ತಲೆ ಬಹುಮಾನಗಳನ್ನು ನಿಮ್ಮ ಮುದ್ದು ಕಂದಮ್ಮಗಳು ಗೆಲ್ಲಬಹುದಾಗಿದೆ. ಸೋ ಮಿಸ್ ಮಾಡ್ದೇ ಬನ್ನಿ..

ನಿನ್ನೆ ನಟಿ, ಆ್ಯಂಕರ್ ಜಾಹ್ನವಿ ಮತ್ತು ಮಿಮಿಕ್ರಿ ಗೋಪಿ ಎಕ್ಸ್​ ಪೋದಲ್ಲಿ ನಮ್ಮೊಡನೆ ಪಾಲ್ಗೊಂಡಿದ್ದು ವಿಶೇಷ

 

Comments (0)

Your email address will not be published. Required fields are marked *

Back to top button