ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್ ಅವ್ರ 95ನೇ ಜನ್ಮದಿನಕ್ಕೆ ಇನ್ನು 5 ದಿನವಷ್ಟೇ ಬಾಕಿ ಇದೆ. ಅಣ್ಣಾವ್ರ ಹುಟ್ಟು ಹಬ್ಬ ಅಂದ್ರೆ ಅದು ಸ್ಯಾಂಡಲ್ವುಡ್ ಗೆ ಅಷ್ಟೇ ಅಲ್ಲದೆ ಕನ್ನಡ ಕಲಾ ರಸಿಕರಿಗೂ ಹಬ್ಬದ ಸಂಭ್ರಮ.
ರಾಜ್‌ಕುಮಾರ್ ಅವ್ರ ಹುಟ್ಟಿದ ಹಬ್ಬವನ್ನ ಸಂಭ್ರಮದಿಂದ ಆಚರಿಸೋ ಸಲುವಾಗಿ ಖ್ಯಾತ ಗಾಯಕ ಮನೋಜವಂ ಆತ್ರೇಯ ತಂಡ ‘ಮೈ ನೇಮ್ ಈಸ್ ರಾಜ್ ಭಾಗ 3‘ ಎಂಬ ಶೀರ್ಷಿಕೆಯಡಿ ಗಾಯನ ಕಾರ್ಯಕ್ರಮ ಆಯೋಜಿಸಿದೆ. ಏಪ್ರಿಲ್ 24ರಂದು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಈ ಗೀತ ನಮನ ಕಾರ್ಯಕ್ರಮ ನಡೆಯಲಿದ್ದು, ಅಣ್ಣಾವ್ರ ಅಭಿಮಾನಿಗಳು ಮಿಸ್ ಮಾಡ್ದೆ ಬನ್ನಿ ಅಂತ ಆಯೋಜಕರು ಮನವಿ ಮಾಡಿದ್ದಾರೆ.