Thursday, November 20, 2025
22.5 C
Bengaluru
Google search engine
LIVE
ಮನೆಜನಸಾಮಾನ್ಯರ ದನಿತ್ಯಾಜ್ಯ ವಿಲೇವಾರಿ ಘಟಕದ ಹೋಗೆಯಿಂದ ಹೈರಾಣಾದ ಧಾರವಾಡ ನಿವಾಸಿಗಳು

ತ್ಯಾಜ್ಯ ವಿಲೇವಾರಿ ಘಟಕದ ಹೋಗೆಯಿಂದ ಹೈರಾಣಾದ ಧಾರವಾಡ ನಿವಾಸಿಗಳು

ಧಾರವಾಡ: ಧಾರವಾಡ ಹೊಸಯಲ್ಲಾಪುರ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿತ್ಯವೂ ಒಂದಿಲ್ಲೊಂದು ಅವಾಂತರಗಳು ಸೃಷ್ಟಿಯಾಗುತ್ತಲಿವೆ. ಅಲ್ಲಿಯ ಅವಾಂತರಗಳಿಂದ ಹಾಗೂ ಘಟಕದಿಂದ ಹೊರ ಬರುವ ದುರ್ವಾಸನೆ ಜತೆಗೆ ಹೋಗೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಅನಾರೋಗ್ಯದ ಭೀತಿ ಎದುರಾಗಿದ್ದು, ಸ್ಥಳೀಯ ನಿವಾಸಿಗಳ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ವಿರುದ್ಧ ಈಗ ನಿತ್ಯವು ಹಿಡಿ ಶಾಪ ಹಾಕುತ್ತಿದ್ದಾರೆ.

ಹೌದು ಧಾರವಾಡದ ಲಕ್ಷ್ಮಿ ನಗರ, ಜನತ ನಗರ, ದಾನೇಸ್ವರಿ ನಗರ ಸೇರಿದಂತೆ ಹೊಸಯಲ್ಲಾಪುರ ನಿವಾಸಿಗಳಲ್ಲಿಯು ಈಗ ಅನಾರೋಗ್ಯದ ಭೀತಿ ಎದುರಾಗಿದೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಗರದಿಂದ ತಂದ ಸುರಿಯುವ ಒಣ ಹಾಗೂ ಹಸಿ ಕಸಕ್ಕೆ ನಿತ್ಯವು ಸಂಜೆ ಮಧ್ಯಾಹ್ನ ಸಮಯದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹೋಗೆ ನಗರದಲ್ಲಿ ಪಸರಿಸುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಅನಾರೋಗ್ಯಕ್ಕೆ ದೂಡುತ್ತಿದೆ.

ಜತೆಗೆ ಸ್ಥಳೀಯ ನಿವಾಸಿಗಳು ಹಲವು ಬಾರಿ ಘಟಕ ಸ್ಥಾಳಾಂತರಿಸಲು ಒತ್ತಾಯ ಮಾಡುತ್ತಲೇ ಬಂದಿದ್ದು, ಪ್ರಯೋಜನವಾಗಿಲ್ಲ. ಹೊಗೆ ದುರ್ವಾಸನೆಯ ಅವಾಂತರಗಳಿಗೂ ಕಡಿವಾಣ ಹಾಕೋ ಪ್ರಯತ್ನಗಳನ್ನು ಪಾಲಿಕೆ ಮಾಡುತ್ತಿಲ್ವಂತೆ.

ಇದರಿಂದಾಗಿ ಇಲ್ಲಿ ಸ್ಥಳೀಯ ನಾಲ್ಕೈದು ನಗರದ ನಿವಾಸಿಗಳು ನಿತ್ಯವು ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.‌ ಕೂಡಲೇ ಘಟಕದಲ್ಲಿನ ತ್ಯಾಜ್ಯಕ್ಕೆ ಬೆಂಕಿ ಹಚ್ಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಈ ಘಟಕವನ್ನು ಸ್ಥಾಳಾಂತರ ಮಾಡಿಲು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ನಾವೂ ಅನಿವಾರ್ಯವಾಗಿ ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

 

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments