ಹೈದರಾಬಾದ್: ಭಾರೀ ಮಳೆಯಲ್ಲಿ ಕರೆಂಟ್ ಶಾಕ್ ಹೊಡೆದು 40ವರ್ಷದ ಹಣ್ಣು-ತರಕಾರಿ ವ್ಯಾಪಾರಿಯೊಬ್ಬ ನೋಡ ನೋಡ್ತಿದ್ದಂತೆ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಫಕ್ರು ಎಂದು ಗುರುತಿಸಲಾಗಿದ್ದು, ನೀರು ತುಂಬಿದ್ದ ರಸ್ತೆ ದಾಟಿ ಬಂದು ವಿದ್ಯುತ್ ಕಂಬವನ್ನು ಮುಟ್ಟಿದ ಕೂಡಲೇ ಅವರಿಗೆ ಶಾಕ್ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗುತ್ತಿದೆ.
ತೆಲಂಗಾಣದ ಬಹುದ್ದೂರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಆರಂಭದಲ್ಲಿ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಕಂಡು ಆತ ಕುಡಿದು ಬಿದ್ದಿರುವುದೆಂದು ಭಾವಿಸಿದ ಜನ ನಿರ್ಲಕ್ಷ್ಯ ಮಾಡಿ ಹೋಗಿದ್ದರು. ಬಳಿಕ ಆತನನ್ನು ಗಮನಿಸಿದ ಪೊಲೀಸರು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಆತನ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಫಕ್ರು ಜಲಾವೃತಗೊಂಡಿದ್ದ ರಸ್ತೆ ದಾಟಿ ಬಂದು ಅಲ್ಲೇ ಇದ್ದ ವಿದ್ಯುತ್ ಕಂಬವನ್ನು ಮುಟ್ಟುತ್ತಾನೆ ಆಗ ಇದ್ದಕ್ಕಿದ್ದಂತೆ ಆತ ಕುಸಿದು ಬಿದ್ದು ನೆಲದಲ್ಲಿ ಒದ್ದಾಡೋಕೆ ಶುರು ಮಾಡುವುದನ್ನು ವೈರಲಾಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಬಹದ್ದೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Be careful, stay away from #ElectricityPole during rain.#CCTv : A man died of electrocution after he touched an electricity pole, during heavy rains, near Bahadurpura 'X' road in Hyderabad.#HyderabadRains #Hyderabad #Electrocution #ElectricShock pic.twitter.com/jDB5Jr7IxA
— Surya Reddy (@jsuryareddy) May 7, 2024
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com