ನೆಲಮಂಗಲ: ನೆಲಮಂಗಲ ತೋಟದ ಮನೆಯ ಬಳಿ ದೈತ್ಯ ಚಿರತೆಯೊಂದು ಪತ್ತೆಯಾಗಿದ್ದು ಊರವರಲ್ಲಿ ಆತಂಕ ಮನೆ ಮಾಡಿದೆ. ಆಹಾರ ಅರಸಿ ದಿನ ರಾತ್ರಿ ನಾಯಿಯನ್ನ ಬೆನ್ನಟ್ಟುತ್ತಿದೆ ದೈತ್ಯ ಚಿರತೆ ರಾತ್ರಿ ಓಡಾಡೋದಕ್ಕೂ ಭಯ ವಾಗ್ತಿದೆ ಎನ್ನುತ್ತಿದ್ದಾರೆ ಊರಿನ ಜನರು
ನೆಲಮಂಗಲ ತಾಲೂಕಿನ ಗೊಟ್ಟಿಗೆರೆ ಗ್ರಾಮದ ಭರತ್ ಎಂಬುವವರ ಮನೆಯ ಬಳಿ ಪ್ರತ್ಯಕ್ಷ ವಾಗಿರುವ ದೈತ್ಯ ಚಿರತೆ. ಸದ್ಯ ಕಬ್ಬಿಣದ ಬೋನ್ ನಲ್ಲಿ ಶ್ವಾನ ಇದ್ದರಿಂದ ಅದು ಸೇಫ್ ಆಗಿದೆ. ಚಿರತೆಯ ಎಲ್ಲಾ ದೃಶ್ಯಗಳು ಮನೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.