ಸಿಹಿಖಾದ್ಯಗಳಲ್ಲಿ ಎಷ್ಟೋ ರೀತಿಯ ವೆರೈಟಿಗಳನ್ನು ತಿಂದಿರುತ್ತೀರ. ಲಡ್ಡು, ಮೈಸೂರ್ ಪಾಕ್, ಹಾಲುಖೋವಾ, ಪೇಡಾ, ಜಾಮೂನ್, ರಸಗುಲ್ಲಾ ಸೇರಿದಂತೆ ಹಲವು ರೀತಿಯ ಸಿಹಿ ತಿಂಡಿ ಸವಿದಿರುತ್ತೀವಿ. ನೀವು ಎಂದಾದರೂ ಕಪ್ಪು ಜಿಲೇಬಿಯನ್ನು ತಿಂದಿದ್ದೀರಾ? ಜಿಲೇಬಿ ಎಂದ ಕೂಡಲೇ ನಮಗೆ ಕೇಸರಿ ಬಣ್ಣದಲ್ಲಿ ರೌಂಡ್ ರೌಂಡ್ ಆಗಿ ಸಕ್ಕರೆ ಪಾಕದಿಂದ ಫಳಫಳ ಅನ್ನುವ ಸ್ವೀಟ್ ತಲೆಗೆ ಬರುತ್ತದೆ. ಆದರೆ ಅದೇ ಜಿಲೇಬಿಯನ್ನು ಇಲ್ಲೊಂದು ಕಡೆ ಕಪ್ಪಾಗಿ ಮಾಡಿ, ಕರಿ ಜಿಲೇಬಿ ಅಂತ ಮಾರುತ್ತಿದ್ದಾರೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಕಂಡ ಆಹಾರ ಪ್ರಿಯರಿಗೆ ಕುತೂಹಲ ಹೆಚ್ಚಿಸಿದೆ. ವಿಡಿಯೋದಲ್ಲಿ ಕಪ್ಪು ಬಣ್ಣದಲ್ಲಿ ಜಿಲೇಬಿಯನ್ನು ತಯಾರಿಸಲಾಗಿದೆ. ಈ ವೆರೈಟಿ ಜಿಲೇಬಿ ಬಗ್ಗೆ ತಿಳಿದುಕೊಳ್ಳಲು ನೆಟ್ಟಿಗರು ಉತ್ಸಾಹ ತೋರಿಸಿದ್ದಾರೆ.

ಜಿಲೇಬಿ ಹಿಟ್ಟನ್ನು ಕಾದಿರುವ ಎಣ್ಣೆಯೊಳಕ್ಕೆ ಜಿಲೇಬಿ ಮಾಡುವ ವ್ಯಕ್ತಿ ಸುರಳಿಯಂತೆ ಸುತ್ತುತ್ತಾ ಹಾಕಿದ್ದಾರೆ. ಇದನ್ನು ಎಣ್ಣೆ ಕರಿಯುವ ವೇಳೆ ನಿಧಾನವಾಗಿ ಬಣ್ಣ ಬದಲಾಗುತ್ತಾ ಹೋಗುತ್ತದೆ. ಬಣ್ಣ ಬದಲಾಗುತ್ತಿದ್ದಂತೆ ಪಕ್ಕದಲ್ಲೇ ಇರುವ ಸಕ್ಕರೆ ಪಾಕಕ್ಕೆ ಜಿಲೇಬಿ ಹಾಕುತ್ತಾರೆ. ಕೂಡಲೇ ಜಿಲೇಬಿ ಬಣ್ಣ ಮತ್ತಷ್ಟು ಕಪ್ಪಾಗುತ್ತದೆ. ನೋಡಿದ ಕೂಡಲೇ ಸೀದೋಗಿದೆ ಎನಿಸುವಂತೆ ಕಾಣುತ್ತದೆ. ಆದರೆ ಈ ವೆರೈಟಿ ಜಿಲೇಬಿಯ ಬಣ್ಣವೇ ಕಪ್ಪು.
ಫುಡ್ ಬ್ಲಾಗರ್ ಒಬ್ಬರು “ದಿ ಗ್ರೇಟ್ ಇಂಡಿಯನ್ ಫುಡೀ”ಎಂಬ ಹೆಸರಿನ ಖಾತೆದಾರ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆಯ ಈ ಕಪ್ಪು ಜಿಲೇಬೀ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


