ರಾಜಕೀಯಸುದ್ದಿ

ಅಕ್ರಮವಾಗಿ ಬ್ಯಾನರ್’ ಅಳವಡಿಸಿದವರಿಗೆ BBMP ಶಾಕ್ : FIR ದಾಖಲು

ಬೆಂಗಳೂರು: ನಗರದಲ್ಲಿ ಕೋರ್ಟ್ ಆದೇಶದಂತೆ ಅನಧಿಕೃತವಾಗಿ ಬ್ಯಾನರ್ ಹಾಕುವುದನ್ನು ನಿಷೇಧಿಸಲಾಗಿದೆ. ಆದರೂ ಅಕ್ರಮವಾಗಿ ಬ್ಯಾನರ್ ಅಳವಡಿಸಿರುವವರ ಮೇಲೆ ಬಿಬಿಎಂಪಿಯಿಂದ ಎಫ್.ಐ.ಆರ್ ದಾಖಲಿಸಿ ಶಾಕ್ ನೀಡಲಾಗಿದೆ.

ಬೆಂಗಳೂರು ನಗರ ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಬನಶಂಕರಿ 2ನೇ ಹಂತ ದೇವೇಗೌಡ ಪೆಟ್ರೋಲ್ ಬಂಕ್ ವೃತ್ತ, ಎಂ ಕೆ ಪುಟ್ಟಲಿಂಗಯ್ಯ ರಸ್ತೆಯ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಸ್ವತ್ತಿಗೆ “ಶ್ರೀ ಕಾರ್ತಿಕ್ ವೆಂಕಟೇಶ ಮೂರ್ತಿ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು” ಎಂಬ ಬ್ಯಾನರ್ ಗಳನ್ನು ಅಕ್ರಮವಾಗಿ ಅಳವಡಿಸಿ ನಗರದ ಸೌಂಧರ್ಯ ವನ್ನು ಹಾಳುಮಾಡಿರುತ್ತಾರೆ.

ಈ ಸಂಬಂಧ ಪ್ಲೈಯಿಂದ ಸ್ಕ್ವಾಡ್ ತಂಡದ ನಾಯಕ ಅವೀಶ್ ಹೆಚ್.ಎಂ ರವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದಿನಾಂಕ: 10-05-2024 ರಂದು ದೂರು ನೀಡಿ ಎಫ್.ಐ.ಆರ್ ದಾಖಲಿಸಿರುತ್ತಾರೆ.

ಇಂತಹ ಅಕ್ರಮ ಮತ್ತು ಅನಧಿಕೃತ ಬ್ಯಾನರ್‌ಗಳು ಆಸ್ತಿ ವಿರೂಪ ಕಾಯ್ದೆ ಮತ್ತು ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಬಿಬಿಎಂಪಿಯಲ್ಲಿ ಎಲ್ಲಿಯಾದರೂ ಇಂತಹ ಅನಧಿಕೃತ ಪೋಸ್ಟರ್ ಅಥವಾ ಬ್ಯಾನರ್‌ಗಳನ್ನು ಹಾಕಿದರೆ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ.

ಅಕ್ರಮ ಬ್ಯಾನರ್ ಮತ್ತು ಪ್ರದರ್ಶನಗಳ ಬಗ್ಗೆ ದೂರುಗಳನ್ನು ಸ್ಥಳ ಮತ್ತು ಚಿತ್ರದ ಸಮೇತ ಪಾಲಿಕೆಯ ವ್ಯಾಟ್ಸಾಪ್ ನಂಬರ್ 94806 85700 ಗೆ ಕಳುಹಿಸಲು ಎಲ್ಲಾ ನಾಗರೀಕರಲ್ಲಿ ವಿನಂತಿಸಲಾಗಿದೆ.

Comments (0)

Your email address will not be published. Required fields are marked *

Back to top button