ಬೆಂಗಳೂರು : ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ‘ಒನ್ಸ್ ಮೋರ್ ಒನ್ಸ್ ಮೋರ್’, ಬೆಳ್ಳುಳ್ಳಿ ಕಬಾಬ್ ‘ಸ್ವಲ್ಪ ರುಬ್ಬಿಕೊಡಪ್ಪ ರಾಹುಲಾ’ ಡೈಲಾಗ್‌ಗಳು ಸಖತ್ ಫೇಮಸ್ ಆಗಿತ್ತು. ಇದೀಗ ಚಂದ್ರು ಅವರು ಟಿವಿ ಪರದೆಯಲ್ಲಿ ಅಡುಗೆ ಮೂಲಕ ರಂಜಿಸಲು ರೆಡಿಯಾಗಿದ್ದಾರೆ.
ಮೂಲತಃ ಮೇಕಪ್ ಮ್ಯಾನ್ ಆಗಿದ್ದ ಚಂದ್ರು, ನಟಿ ಮಾಲಾಶ್ರೀ ಅವರ ಜೊತೆಗೂ ಕೆಲಸ ಮಾಡಿಕೊಂಡಿದ್ದರು. ಅಣ್ಣಾವ್ರ ಕುಟುಂಬದ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಚಂದ್ರು, ಸದ್ಯ ‘ಬೆಳ್ಳುಳ್ಳಿ ಕಬಾಬ್’ ಮೂಲಕ ವೈರಲ್ ಆಗಿದ್ದಾರೆ. ಸದ್ಯ ಸವಿರುಚಿ ಅಡುಗೆ ಕಾರ್ಯಕ್ರಮಕ್ಕಾಗಿ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಹೊಸ ಸೀಸನ್ ‘ಸವಿರುಚಿ’ಯಲ್ಲಿ ಹಲವು ಹೊಸ ಅಂಶಗಳು ಇರಲಿವೆ. ಕರ್ನಾಟಕದ ಮೂಲೆಮೂಲೆಗಳ ಪಾಕಪ್ರವೀಣರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಮೂಲೆಮೂಲೆಗಳಿಗೆ ತೆರಳಿ ಅಲ್ಲಿನ ಸಾಂಪ್ರದಾಯಿಕ ಅಡುಗೆಯನ್ನು ಪರಿಚಯಿಸುವುದರಿಂದಾಗಿ ಈ ಸೀಸನ್ನು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಸವಿರುಚಿ’ಯಲ್ಲಿ ಬರೀ ಅಡುಗೆ ಮಾಡುವುದಷ್ಟೇ ಅಲ್ಲದೆ, ಅದರ ಪೌಷ್ಟಿಕತೆಯ ಕುರಿತು ತಜ್ಞರ ಅಭಿಪ್ರಾಯಗಳೂ ಇರುವುದು ಈ ಕಾರ್ಯಕ್ರಮವನ್ನು ವಿಶೇಷಗೊಳಿಸಲಿವೆ.