ಬಾಗಲಕೋಟೆ: ಸಮೀಪದ ಇಂಗಳಗಿ ರಸ್ತೆಯಲ್ಲಿ ಮಾರುತಿ ಸುಜುಕಿ ಎಸ್ ಕ್ರಾಸ್ ಮಾಡಲ್ ಕಾರಿಗೆ ಬೆಂಕಿ ಹತ್ತಿಕೊಂಡು ವ್ಯಕ್ತಿಯೋರ್ವ ಸಜೀವವಾಗಿ ದಹನವಾದ ಘಟನೆ ಶನಿವಾರ ಸಂಜೆ ನಡೆದಿದೆ.
ಸಜೀವ ದಹನವಾದ ವ್ಯಕ್ತಿಯನ್ನು ಹುನಗುಂದ ತಾಲೂಕಿನ ಚಿಕ್ಕಮಾಗಿ ಗ್ರಾಮದ ಸಂಗನಗೌಡ ಪಾಟೀಲ (49) ಎಂದು ಗುರುತಿಸಲಾಗಿದೆ ಬಾಗಲಕೋಟೆಗೆ ಕೆಲಸ ನಿಮಿತ್ತ ಬೆಳಗ್ಗೆ 11ರ ಸುಮಾರಿಗೆ ತೆರಳಿದ್ದ ಇವರು ಸಂಜೆ ಚಿಕ್ಕಮಾಗಿಗೆ ಹಿಂದಿರುಗುತ್ತಿದ್ದರು. ಸಂಗನಗೌಡ ಪಾಟೀಲ ಬೀಳಗಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದರು.
ಕಾರಿಗೆ ಯಾವ ಕಾರಣದಿಂದ ಬೆಂಕಿ ಹತ್ತಿಕೊಂಡಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಾಗಲಕೋಟೆ ಗ್ರಾಮೀಣ ಪೊಲೀಸರು ಹಾಗೂ ಅಮೀನಗಡ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com