ಕ್ರೈಂ ಸ್ಟೋರಿಸುದ್ದಿ

 ರೈಲಿನಿಂದ ತುಂಗಾ ನದಿಗೆ ಹಾರಿ ಯುವಕ ಆತ್ಮಹತ್ಯೆ 

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಯುವಕನೊಬ್ಬ ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಸಮೀಪ ನಡೆದಿದೆ. 

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಆಗಮಿಸಿದ್ದ 35 ವರ್ಷದ ಅಸುಪಾಸಿನ ಯುವಕ  ಇದ್ದಕ್ಕಿದ್ದಂತೆ ತುಂಗಾ ನದಿ ಬಳಿ ನದಿಗೆ ಹಾರಿ ಮೃತಪಟ್ಟಿದ್ದಾನೆ. ಮೃತನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನದಿಯಲ್ಲಿ ನೀರು ಬತ್ತಿ ಹೋಗಿರುವುದರಿಂದ ಆತನ ತಲೆಗೆ ಕಲ್ಲು ಜಜ್ಜಿ ಬಲವಾದ ಪೆಟ್ಟು ಬಿದ್ದ ಪರಿಣಾಮ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಸಹ  ಪ್ರಯಾಣಿಕರೊಬ್ಬರು ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಸ್ಥಳೀಯರ ಸಹಾಯದೊಂದಿಗೆ ನದಿಯಿಂದ ಮೃತದೇಹ ಹೊರತೆಗೆದಿದ್ದಾರೆ.

Comments (0)

Your email address will not be published. Required fields are marked *

Back to top button