Wednesday, April 30, 2025
24.6 C
Bengaluru
LIVE
ಮನೆರಾಜ್ಯಇಂದು ಫ್ರೀಡಂ ಟಿವಿ ವಾಹಿನಿ ಲೋಕಾರ್ಪಣೆ

ಇಂದು ಫ್ರೀಡಂ ಟಿವಿ ವಾಹಿನಿ ಲೋಕಾರ್ಪಣೆ

ನಾಡಿನ ಜನತೆಗೆ ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ಇನ್ನೊಂದು ಸಂತಸದ ಸುದ್ದಿ. ಜನಸಾಮಾನ್ಯರ ಶಕ್ತಿ ಎಂಬ ಟ್ಯಾಗ್​ಲೈನ್​ನೊಂದಿಗೆ ಹೊಚ್ಚ ಹೊಸ ಕನ್ನಡ ವಾಹಿನಿ ಪ್ರಸಾರ ಆಗುತ್ತಿದೆ. ಇದೇ ಫ್ರೀಡಂ ಟಿವಿ. ಫ್ರೀಡಂ ಟಿವಿ ಕನ್ನಡ ವಾಹಿನಿ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಜನಸಾಮಾನ್ಯರ ಶಕ್ತಿಯಾದ ಫ್ರೀಡಂ ಟಿವಿಯನ್ನು ಜನಸಾಮಾನ್ಯರೇ ಉದ್ಘಾಟನೆಗೊಳಿಸುತ್ತಿದ್ದಾರೆ. ರೈತರು, ಕಟ್ಟಡ ಕಾರ್ಮಿಕರು, ಪೌರ ಕಾರ್ಮಿಕರು, ಚಾಲಕ ವರ್ಗದಿಂದಲೇ ಇಂದು ಫ್ರೀಡಂ ಟಿವಿ ಲೋಕಾರ್ಪಣೆಗೊಳ್ಳುತ್ತಿರೋದು ವಿಶೇಷ

ಹಿರಿಯ ಪತ್ರಕರ್ತ ಎಲ್​.ಎಂ.ನಾಗರಾಜು ಅವರ ಸಾರಥ್ಯದಲ್ಲಿ ಫ್ರೀಡಂ ಟಿವಿ ಲೋಕಾರ್ಪಣೆಗೊಳ್ಳುತ್ತಿದೆ.

ಫ್ರೀಡಂ ಎಂದರೆ ಸ್ವಾತಂತ್ರ್ಯ. ನಾವು ಇದಕ್ಕೆ ಬದ್ಧರು. ಜನರ ಬದುಕು, ಸ್ವಾತಂತ್ರ್ಯಕ್ಕೆ ನಾವು ಬದ್ಧರು. ಜನ ಸಾಮಾನ್ಯರು ನಮಗೆ ಮುಖ್ಯರೇ ಹೊರತು ಬೇರೆ ಯಾರೂ ಅಲ್ಲ. ಮಹಾತ್ಮಾ ಗಾಂಧಿ ಅವರು ಹೇಳಿದಂತೆ, ನಮ್ಮದು ಸತ್ಯದೆಡೆಗಿನ ಪಯಣ. ಸತ್ಯವೇ ನಮ್ಮ ಧ್ಯೇಯ, ಅದುವೇ ನಮ್ಮ ನಂಬಿಕೆ.

ನಾವು ಸತ್ಯವನ್ನು ಹೇಳುವಾಗ ಯಾರಿಗೂ ಹೆದರುವುದಿಲ್ಲ. ಯಾರನ್ನೂ ಹೆದರಿಸುವುದಿಲ್ಲ. ನಿಮ್ಮ ಪ್ರೀತಿಯ ಫ್ರೀಡಂ ಟೀವಿ ನಿಮ್ಮನ್ನು ತಲುಪಲು ಸಿದ್ಧವಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಸ್ಟುಡಿಯೋ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಾಜ್ಯದ ಜಿಲ್ಲೆ ಮತ್ತು ತಾಲೂಕುಗಳಿಂದ ಸುದ್ದಿ ನೀಡಲು ನಾವು ಅದ್ಭುತವಾದ ತಂಡವನ್ನು ಕಟ್ಟುತ್ತಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ವಾರ್ತೆಯನ್ನು ತಂದು ನಿಮಗೆ ತಲುಪಿಸುವುದು ನಮ್ಮ ಜವಾಬ್ದಾರಿ.

ನಮಗೆ ಎಲ್ಲ ಸುದ್ದಿಯೂ ಮುಖ್ಯ. ಫ್ರೀಡಂ ಟೀವಿ ಎಂದರೆ ವಸ್ತುನಿಷ್ಠ ವರದಿಗಾರಿಕೆ, ವೃತ್ತಿಪರ ಸಂಪಾದಕೀಯ ತಂಡ, ಜನಸಾಮಾನ್ಯರ ಪರ ಅಚಲ ನಿಲುವು. ಪಂಚಾಯ್ತಿ ಪಡಸಾಲೆಯಿಂದ ಹಿಡಿದು ವಿಧಾನಸೌಧ, ಸಂಸತ್ತಿನ ಮೊಗಸಾಲೆವರೆಗೂ ಆಡಳಿತದ ಮೇಲೆ ನಮ್ಮದು ಸದಾ ಕಾವಲುಗಣ್ಣು.

ಫ್ರೀಡಂ ಟೀವಿ ಶಿಸ್ತುಬದ್ಧ ಮಾರುಕಟ್ಟೆ ವಿಭಾಗದೊಟ್ಟಿಗೆ ವೃತ್ತಿಪರ ಪತ್ರಕರ್ತರೇ ಕಟ್ಟುತ್ತಿರುವ ಮಾಧ್ಯಮ ಸಂಸ್ಥೆ. ಈ ವಾಹಿನಿಯನ್ನು ಹರಸಿ-ಹಾರೈಸಿ, ಪ್ರೀತಿ ತೋರಿಸಿ. ನಿಮ್ಮ ನಿರೀಕ್ಷೆಯನ್ನು ನಾವೆಂದೂ ಹುಸಿ ಮಾಡುವುದಿಲ್ಲ.

ಫ್ರೀಡಂ ಟೀವಿ ಬಳಗ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments