ಬೆಂಗಳೂರು : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರ ಬಾಕ್ಸ್ಆಫೀಸ್ನಲ್ಲಿ ಹಿಟ್ ಆಗಿದೆ. ಸದ್ಯ ದೀಪಿಕಾ ಪಡುಕೋಣೆ ಗರ್ಭಿಣಿ. ಆದರೆ ಸಿನಿಮಾ ಪ್ರಚಾರದಲ್ಲಿ ಅವರು ಹಿಂದೆ ಬಿದ್ದಿಲ್ಲ. ದೀಪಿಕಾ ಪಡುಕೋಣೆ ಬೇಬಿ ಬಂಪ್‌ನೊಂದಿಗೆ ‘ಕಲ್ಕಿ 2898 ಎಡಿ’ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಸಾಕಷ್ಟು ಕಾಳಜಿ ವಹಿಸುತ್ತಿದ್ದಾರೆ. ದೀಪಿಕಾ ಇನ್ಮುಂದೆ ಸಿನಿಮಾ ಮಾಡದೆ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಜನರು ಈ ರೀತಿ ಏಕೆ ಭಾವಿಸುತ್ತಿದ್ದಾರೆ? ದೀಪಿಕಾ ಪಡುಕೋಣೆ ಒಮ್ಮೆ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ.
ಕೆಲವು ವರ್ಷಗಳ ಹಿಂದೆ ರಣವೀರ್ ಹಾಗೂ ದೀಪಿಕಾ ಮದುವೆಯಾಗಿದ್ದಾರೆ. ಶೀಘ್ರದಲ್ಲೇ ಮಗುವಿಗೆ ಪೋಷಕರಾಗಲಿದ್ದಾರೆ. ಇಷ್ಟೇ ಅಲ್ಲ, ದೀಪಿಕಾ ಪಡುಕೋಣೆ ಸಂದರ್ಶನ ಒಂದರಲ್ಲಿ ‘ನಾನು ಮಕ್ಕಳನ್ನು ಪ್ರೀತಿಸುತ್ತೇನೆ ಮತ್ತು ಅನೇಕ ಮಕ್ಕಳನ್ನು ಹೊಂದಲು ಬಯಸುತ್ತೇನೆ’ ಎಂದು ಹೇಳಿದ್ದರು. ಶಾರುಖ್ ಖಾನ್ ಅವರ ಮಗ ಅಬ್ರಾಮ್ ಜೊತೆ ನಾನು ಹೆಚ್ಚು ಸಮಯ ಕಳೆಯುತ್ತೇನೆ ಎಂದು ದೀಪಿಕಾ ಹೇಳಿದ್ದರು. ಇದು ಮಕ್ಕಳ ಮೇಲೆ ಅವರಿಗೆ ಇರೋ ಪ್ರೀತಿಗೆ ಒಳ್ಳೆಯ ಉದಾಹರಣೆ.
ಈ ವರ್ಷ ದೀಪಿಕಾ ಪಡುಕೋಣೆಗೆ ವಿಶೇಷವಾಗಿದೆ. ಏಕೆಂದರೆ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇದಾದ ಬಳಿಕ ಅವರು ಸಿನಿಮಾಗಳಲ್ಲಿ ನಟಿಸುವುದಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಸ್ವತಃ ದೀಪಿಕಾ ಉತ್ತರಿಸಬೇಕಿದೆ. ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಮೊದಲ ಮಗುವಿನ ಜನನದ ನಂತರ ಸಿನಿಮಾಗಳಲ್ಲಿ ನಟಿಸೋದನ್ನು ಕಡಿಮೆ ಮಾಡಿದ್ದಾರೆ.