ಕೊಪ್ಪಳ : ಎರಡನೇ ತಿರುಪತಿ ಖ್ಯಾತಿಯ ಐತಿಹಾಸಿಕ ಕನಕಚಲಾಪತಿ ಗರುಡೋತ್ಸವಇಂದು ನಸುಕಿನ ಜಾವದ ಸಮಯದಲ್ಲಿ ಅದ್ದೂರಿಯಾಗಿ ಕೊಪ್ಪಳ ಜಿಲ್ಲೆಯ ಕನಕಗರಿ ಪಟ್ಟಣದಲ್ಲಿ ನಡೆಯಿತು.
ಗರುಡೋತ್ಸವದಲ್ಲಿ ಸಚಿವ ಶಿವರಾಜ್ ತಂಗಡಗಿ ಭಾಗಿಯಾಗಿದ್ದರು. ದಂಪತಿ ಸಮೇತ ಶಿವರಾಜ್ ತಂಗಡಗಿ ದೇವಸ್ಥಾನಕ್ಕೆ ಆಗಮಿಸಿದ್ದರು. ಸಚಿವ ಶಿವರಾಜ್ ತಂಗಡಗಿ ಜೊತೆಗೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಸಹ ಇದ್ದರು.
ಕೊಪ್ಪಳ ಜಿಲ್ಲೆಯ ಕನಕಗರಿ ಪಟ್ಟಣದಲ್ಲಿರೋ ಐತಿಹಾಸಿಕ ಕನಕಾಚಲಪತಿ ದೇವಸ್ಥಾನ. ಇದು ಎರಡನೇ ತಿರುಪತಿ ಎಂಬ ಖ್ಯಾತಿಯನ್ನೂ ಸಹ ಪಡೆದಿದೆ. ಕನಕಗಿರಿ, ಸಚಿವ ಶಿವರಾಜ್ ತಂಗಡಗಿ ಅವರ ಸ್ವಕ್ಷೇತ್ರವಾಗಿದೆ.