ಬೆಂಗಳೂರು : ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಇಂದು ಪೊಲೀಸರ ವಿಚಾರಣೆಗೆ ಹಾಜರಾಗಲಿದ್ದಾರೆ.ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ ವರ್ತೂರ್ ಪ್ರಕಾಶ್ ವಿಚಾರಣೆ ನಡೆಯಲಿದೆ. ಪೊಲೀಸರು ಈಗಾಗಲೇ ವರ್ತೂರ್ ಪ್ರಕಾಶ್‌ಗೆ ನೋಟಿಸ್ ನೀಡಿದ್ದು, ಶ್ವೇತಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ವರ್ತೂರ್ ಪ್ರಕಾಶ್ ಹೆಸರೇಳಿ ಚಿನ್ನದ ವರ್ತಕರ ಬಳಿ ಚಿನ್ನ ಪಡೆದಿದ್ದಳು. ಸುಮಾರು ಎರಡೂವರೆ ಕೋಟಿ ರೂ. ಚಿನ್ನವನ್ನು ಮಹಿಳೆ ಖರೀದಿಸಿದ್ದು, ಚಿನ್ನ ಪಡೆಯುವಾಗ ವರ್ತೂರ್ ಪ್ರಕಾಶ್ ಹೆಸರು ಹೇಳಿರೋದು ಬಯಲಾಗಿದೆ. ಜೊತೆಗೆ ವರ್ತೂರ್ ಪ್ರಕಾಶ್ ಮನೆಯ ವಿಳಾಸ ಕೂಡ ನೀಡಿದ್ದಳು. ಚಿನ್ನದ ಹಣವನ್ನು ವರ್ತೂರ್ ಪ್ರಕಾಶ್ ಕೊಡುವುದಾಗಿ ಮಹಿಳೆ ಚಿನ್ನ ಪಡೆದಿದ್ದಳು. ಅಡ್ರಸ್ ತೆಗೆದುಕೊಂಡು ಅಂಗಡಿ ಮಾಲೀಕರು ಮನೆಗೆ ಹೋದಾಗ ವಂಚನೆ ಬೆಳಕಿಗೆ ಬಂದಿದೆ.
ಮಾಜಿ ಸಚಿವ ವರ್ತೂರ್ ಪ್ರಕಾಶ್‌ಗೆ ಇಂದು ಪೊಲೀಸ ವಿಚಾರಣೆ
ತನಗೂ ವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ವರ್ತೂರ್ ಪ್ರಕಾಶ್ ಹೇಳಿದ್ದರು. ಹೀಗಾಗಿ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ಅಂಗಡಿ ಮಾಲೀಕರು ದೂರು ನೀಡಿದ್ದರು. ಈ ಹಿನ್ನಲೆ ಇಂದು ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆರೋಪಿ ಶ್ವೇತಾ ಗೌಡಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಫ್ರೇಜರ್ ಟೌನ್ ಎಸಿಪಿ ಗೀತಾ ನೇತೃತ್ವದ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ವರ್ತೂರ್ ಪ್ರಕಾಶ್ ಹಾಗೂ ಆರೋಪಿ ಪೋನ್‌ನಲ್ಲಿ ಸತತ ಕಾಂಟಾಕ್ಟ್‌ನಲ್ಲಿ ಇರೋದು ಪತ್ತೆಯಾಗಿದೆ. ಅಲ್ಲದೇ ವರ್ತೂರ್ ಪ್ರಕಾಶ್ ಜೊತೆ ಆರೋಪಿತೆ ಇರುವ ಸಿಸಿಟಿವಿ ಪೂಟೇಜ್, ಕಾಲ್ ಸಿಡಿಆರ್ ಕೂಡ ಪೊಲೀಸರು ಕಲೆ ಹಾಕಿದ್ದಾರೆ.
RELATED ARTICLES