Tuesday, January 27, 2026
24.7 C
Bengaluru
Google search engine
LIVE
ಮನೆ#Exclusive Newsಸತತ ಮೂರನೇಯ ದಿನವು ಕಲಾಪದಲ್ಲಿ ಕದನ ; ಜಮ್ಮು ಕಾಶ್ಮೀರ

ಸತತ ಮೂರನೇಯ ದಿನವು ಕಲಾಪದಲ್ಲಿ ಕದನ ; ಜಮ್ಮು ಕಾಶ್ಮೀರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಒತ್ತಾಯಿಸಿ ಅಂಗೀಕರಿಸಿದ ನಿರ್ಣಯವನ್ನು ವಿರೋಧಿಸಿ ಬಿಜೆಪಿ ಶಾಸಕರು ಸತತ ಮೂರನೇ ದಿನವೂ ಸದನದಲ್ಲಿ ಪ್ರತಿಭಟನೆ ನಡೆಸಿದರು.

 

ಇದರಿಂದಾಗಿ ಇಂದು ನಡೆದ ಕಲಾಪದಲ್ಲೂ ಗದ್ದಲ, ಪ್ರತಿಭಟನೆಗಳು ಮುಂದುವರಿಯಿತು. ಪರಿಣಾಮ ಸ್ಪೀಕ‌ರ್ ಸೂಚನೆಯಂತೆ ವಿರೋಧ ಪಕ್ಷದ 12 ಸದಸ್ಯರು ಮತ್ತು ಅವಾಮಿ ಇತಿಹಾದ್ ಪಕ್ಷದ ಶಾಸಕ ಶೇಖ್ ಖುರ್ಷಿದ್ ಅವರನ್ನು ಮಾರ್ಷಲ್‌ಗಳು ಸದನದಿಂದ ಹೊರಹಾಕಿದ್ದಾರೆ. ಇಂದು ಕಲಾಪ ಆರಂಭವಾದ್ದಂತೆ ‘ಪಾಕಿಸ್ತಾನ ಅಜೆಂಡಾ ನಡೆಯಲ್ಲ’ ಎಂದು ವಿಪಕ್ಷದ ಸದಸ್ಯರು ಘೋಷಣೆಗಳು ಕೂಗಿದರು. ಬಿಜೆಪಿಯ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್ ಅಬ್ದುಲ್ ರಹೀಂ ರಾಥರ್‌ ಬಿಜೆಪಿ ಸದಸ್ಯರನ್ನು ಸದನದಿಂದ ಹೊರಕ್ಕೆ ಕಳುಹಿಸುವಂತೆ ನಿರ್ದೇಶನ ನೀಡಿದರು. ಭಾರಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಲು ಒತ್ತಾಯಿಸಿ ನಿರ್ಣಯ ಅಂಗೀಕರಿಸಲಾಗಿತ್ತು. ಇದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments