#Exclusive NewsTop Newsವೈರಲ್ ನ್ಯೂಸ್ಸುದ್ದಿ

ಮೊದಲ ಬಾರಿಗೆ ಗಗನಯಾನಿಗಳು ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಟಿ!

ಬಾಹ್ಯಾಕಾಶ ಕೇಂದ್ರದಿಂದ ಸುನಿತಾ ವಿಲಿಯಮ್ಸ್ ಸುದ್ದಿಗೋಷ್ಟಿ

ಸುನಿತಾ ವಿಲಿಯಮ್ಸ್​ ಮತ್ತು ಬೂಚ್​ ವಿಲ್ಮೋರ್​ ಭೂಮಿಯಿಂದ 420 ಕಿಲೋ ಮೀಟರ್ ದೂರದಲ್ಲಿರುವ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಭೂಮಿಗೆ ವಾಪಸ್ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಗಗನಯಾನಿಗಳು ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಟಿ ನಡೆಸಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.ಬೋಯಿಂಗ್ ವಿಮಾನ ಟೇಕ್ ಆಫ್ ಆಗುವುದು ಮತ್ತು ಕಕ್ಷೆಯಲ್ಲಿ ಹಲವಾರು ತಿಂಗಳು ಕಳೆಯುವುದು ಕಷ್ಟಕರವಾಗಿದೆ. ಆದರೆ ನಾವು ಬಾಹ್ಯಾಕಾಶದಲ್ಲಿ ಕಳೆಯಲು ಇಷ್ಟಪಡ್ತೇವೆ. ಇದು ನಮ್ಮ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಎಂದಿದ್ದಾರೆ.ಇದು ನನಗೆ ಖುಷಿ ನೀಡುವ ಸ್ಥಳ. ನಾನು ಬಾಹ್ಯಾಕಾಶದಲ್ಲಿ ಇರಲು ಇಷ್ಟ ಪಡ್ತೇನೆ. ನಾನು ನನ್ನ ತಾಯಿ ಜೊತೆಗಿನ ಅಮೂಲ್ಯ ಸಮಯವನ್ನು ಕಳೆದುಕೊಂಡಿದ್ದೇನೆ. ಈ ನೋವು ಇದೆ. ನಾವು ಪರೀಕ್ಷಕರು, ಅದು ನಮ್ಮ ಕೆಲಸ. ನಾವು ಸಮಸ್ಯೆಗಳನ್ನು ಎದುರಿಸಿ, ಸ್ಟಾರ್​ಲೈನರ್ ಮೂಲಕ ಸುರಕ್ಷಿತವಾಗಿ ಮರಳಿ ಇಳಿಯಲು ಬಯಸಿದ್ದೇವೆ. ನೀವು ಪುಟಗಳನ್ನು ತಿರುಗಿಸಬೇಕು, ಮುಂದಿನ ಅವಕಾಶಕ್ಕಾಗಿ ನಾವು ನೋಡಬೇಕು. ಬಾಹ್ಯಾಕಾಶ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿರಲಿಲ್ಲ. ನಾವಿಬ್ಬರು ಮೊದಲು ಕೂಡ ಇಲ್ಲಿಗೆ ಬಂದಿದ್ದೇವು. ಕೆಲ ವರ್ಷಗಳ ಹಿಂದೆ ಬಾಹ್ಯಾಕಾಶ ನಿಲ್ದಾಣದಲ್ಲಿ ಎರಡು ದೀರ್ಘಾವಧಿಯಲ್ಲಿ ತಂಗಿದ್ದೇವು ಎಂದಿದ್ದಾರೆ.

 

ಜನರಿಗೆ ಧನ್ಯವಾದ
ಇದೇ ವೇಳೆ ಗಗನಯಾತ್ರಿಗಳು ಜನರಿಗೆ ಕೃತಜ್ಞತೆ ಸಲ್ಲಿಸಿದರು. ನಮ್ಮ ಸುರಕ್ಷತೆಗಾಗಿ ಅನೇಕರು ಪ್ರಾರ್ಥನೆ, ಕಾಳಜಿ ತೋರಿಸ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಅವರನ್ನು ಪ್ರಶಂಸಿಸುತ್ತೇವೆ. ನಿಮ್ಮ ಹಾರೈಕೆ, ಪ್ರಾರ್ಥನೆ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿ ಮಾಡಿದೆ. ನಾವು ಮನೆಯಿಂದ ದೂರವಾಗಿ ಕಳೆದುಕೊಳ್ಳುವ ಎಲ್ಲವನ್ನೂ ನಿಭಾಯಿಸಲು ಸಹಾಯ ಮಾಡಿತು. ನವೆಂಬರ್​ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ. ನಾಗರಿಕರು ತಮ್ಮ ಕರ್ತವ್ಯವನ್ನು ಪೂರೈಸಬೇಕು ಎಂದು ಒತ್ತಿ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button