Thursday, January 29, 2026
16.9 C
Bengaluru
Google search engine
LIVE
ಮನೆ#Exclusive Newsಮಕ್ಕಳಿಗಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್​​ನಲ್ಲಿ ಪುಷ್ಪ ಪ್ರದರ್ಶನ: ಫೋಟೋಸ್​ ನೋಡಿ

ಮಕ್ಕಳಿಗಾಗಿ ಬೆಂಗಳೂರಿನ ಕಬ್ಬನ್ ಪಾರ್ಕ್​​ನಲ್ಲಿ ಪುಷ್ಪ ಪ್ರದರ್ಶನ: ಫೋಟೋಸ್​ ನೋಡಿ

ಫ್ಲವರ್ ಶೋ ಅಂದರೆ ಸಾಕು ಮೊದಲಿಗೆ ನೆನಪಾಗುವುದು ಲಾಲ್ ಬಾಗ್. ಪ್ರತಿ ವರ್ಷ ನಡೆಯುವ ಲಾಲ್ ​ಬಾಗ್​ ಫ್ಲವರ್ ಶೋಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಅಲ್ಲಿನ ಸುಂದರವಾದ ವಿಧವಿಧವಾದ ಹೂವುಗಳನ್ನು ಕಂಡು ಆನಂದ ಪಡುತ್ತಾರೆ. ಇದೀಗ ಕಬ್ಬನ್ ಪಾರ್ಕ್‌ನ ಬಾಲಭವನ ಆವರಣದಲ್ಲಿ ಮಕ್ಕಳಿಗೋಸ್ಕರ ಅಂತನೇ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ನೋಡುಗರ ಕಣ್ಮನ ಸೆಳೆಯುತ್ತಿದೆ.

ನವೆಂಬರ್​ 14 ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಈ ಮಕ್ಕಳ ದಿನಾಚರಣೆ ಅಂಗವಾಗಿ ಈ ಬಾರಿ ಕಬ್ಬನ್ ಪಾರ್ಕ್‌ನ ಬಾಲ ಭವನ ಆವರಣದಲ್ಲಿ ಆವರಣದಲ್ಲಿ, ತೋಟಗಾರಿಕೆ ಇಲಾಖೆ, ಬಾಲಭವನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಮಕ್ಕಳ ವಿಷಯಾಧಾರಿತ ಹಾಗೂ ಮಕ್ಕಳಲ್ಲಿ ಪೃಕೃತಿ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಶುಕ್ರವಾರ (ನ.29)ರಿಂದ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ ಮೂರು ದಿನಗಳವರೆಗೆ ನಡೆಯಲಿದ್ದು, ಡಿಸೆಂಬರ್ 1 ರಂದು ಅಂತ್ಯವಾಗಲಿದೆ. ಸಾರ್ವಜನಿಕರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.


ಕಬ್ಬನ್ ಪಾರ್ಕ್​ಗೆ ಬಂದ ಜನರು ಫಲಪುಷ್ಪ ಪ್ರದರ್ಶನವನ್ನು ಕಂಡು ಆನಂದ ಪಟ್ಟರು. ಪುಷ್ಪಗಳಲ್ಲಿ ಮೂಡಿದ ನವಿಲು, ರಾಕೇಟ್, ರೊಬೋಟ್, ಡೈನಾಸೋರ್, ಆನೆಗಳು ಜನರನ್ನು ಆಕರ್ಷಿಸಿದವು.

ವರ್ಲ್ಡ್​​ ಕಪ್ ಟ್ರೋಫಿ ಸೇರಿದಂತೆ ಇನ್ನೀತರ ಫಲಪುಷ್ಪ ಕೃತಿಗಳ ಮುಂದೆ ನಿಂತು ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮಕ್ಕಳು ಕೂಡ ಅತಿ ಉತ್ಸುಲತೆಯಿಂದ ಬಾಲಭವನ ಫಲಪುಷ್ಪ ಪ್ರದರ್ಶನದಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು.

ಇಷ್ಟು ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿತ್ತು. ಆದರೆ, ಈ ಬಾರಿ ಕಬ್ಬನ್ ಪಾರ್ಕ್​ನಲ್ಲೂ ಫಲಪುಷ್ಪ ಪ್ರದರ್ಶನ ನಡಿಯುತ್ತಿದೆ. ಇಂದು ಮತ್ತು ನಾಳೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments