ರಾಜ್ಯಸುದ್ದಿ

ಉದ್ಯಮಿ ಮೇಲೆ ಫೈರಿಂಗ್‌ ಪ್ರಕರಣ: ಆರೋಪಿ ಬಂಧನ

ಬೆಂಗಳೂರು: ಉದ್ಯಮಿಯ ರಾಜಗೋಪಾಲ್ ಮೇಲೆ ಏರ್ ಗನ್ ನಿಂದ ಫೈರಿಂಗ್ ಮಾಡಿದ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.. ಬಂಧಿತ ಆರೋಪಿ ಅಫ್ಜಲ್​​​ನನ್ನು ಬಂಧಿಸಿ ಪೊಲೀಸರು ವಿಚಾರರಣೆ ನಡೆಸುತ್ತಿದ್ಧಾರೆ..

ಡಿಸೆಂಬರ್​​​​ 10 ರಂದು ರಾತ್ರಿ 8:30ರ ಸುಮಾರಿಗೆ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ನರ್ತಕಿ ಹಾಗೂ ಕಾರ್ಗಿಲ್ ಬಾರ್ ನ ಮಾಲೀಕ ರಾಜಗೋಪಾಲ್ ಮೇಲೆ ಫೈರಿಂಗ್ ನಡೆದಿತ್ತು. ಇದರಿಂದ ರಾಜಗೋಪಾಲ್‌ ಅವರ ಕತ್ತಿನ ಭಾಗಕ್ಕೆ ಗಾಯವಾಗಿದ್ದು, ವಿಚಾರಣೆ ವೇಳೆ ಯಾವುದೇ ವ್ಯಕ್ತಿಗಳ ಮೇಲೆ ಅನುಮಾನವಿಲ್ಲ, ಯಾವ ಬೆದರಿಕೆ ಕರೆಯೂ ಬಂದಿಲ್ಲ,ಯಾಕಾಗಿ ಫೈರಿಂಗ್ ಆಯ್ತು? ಯಾವ ಕಾರಣಕ್ಕೆ ಫೈರಿಂಗ್ ಮಾಡಿದ್ರು..? ಗೊತ್ತಿಲ್ಲ ಎಂದು ಉದ್ಯಮಿ ರಾಜಗೋಪಾಲ್ ಹೇಳಿದ್ದಾರೆ.

ಫೈರಿಂಗ್ ಸಂಬಂಧ ನಿನ್ನೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಬಸವನಗುಡಿ ಪೊಲೀಸರಿಂದ ಏರ್ ಗನ್ ಶೂಟರ್ ಗಾಗಿ ಹುಡುಕಾಟ ನಡೆಸಿದ್ದಾರೆ.. ಬುಲೆಟ್‌ ಎಲ್ಲಿಂದ ಹಾರಿ ಬಂದಿದೆ ಎಂಬುದರ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿದರು. ಈ ವೇಳೆ ಹೊರಗಿನಿಂದ ಗುಂಡು ಬಂದಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಗುಂಡು ಬಂದ ಕಡೆಯ ಫ್ಲ್ಯಾಟ್‌ಗಳ ಪರಿಶೀಲನೆಗೆ ಮುಂದಾದರು. ಪರಿಶೀಲನೆ ವೇಳೆ ಅಫ್ಜಲ್‌ ಇರುವ ಫ್ಲ್ಯಾಟ್‌ನಿಂದ ಫೈರ್‌ ಆಗಿರುವುದು ಪತ್ತೆಯಾಗಿದೆ.

ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾನು ಕಾನೂನು ಪದವಿ ಓದುತ್ತಿದ್ದೇನೆ. ಮನೆಯಲ್ಲಿ ಏರ್‌ಗನ್‌ನಿಂದ ಶೂಟಿಂಗ್‌ ಅಭ್ಯಾಸ ಮಾಡುತ್ತಿದ್ದೇನೆ. ಅಭ್ಯಾಸ ಮಾಡುತ್ತಿದ್ದಾಗ ಗುರಿ ತಪ್ಪಿ ಕಿಟಕಿಯಿಂದ ಹೊರ ಹೋಗಿದೆ ಎಂದು ಅಫ್ಜಲ್‌ ಹೇಳಿದ್ದಾನೆ. ರಾಜ್‌ಗೋಪಾಲ್‌ ಅವರು ಸ್ನೇಹಿತರನ್ನು ಭೇಟಿಯಾಗಲು ಪಾರ್ಕ್‌ಗೆ ಬಂದು ವಾಕಿಂಗ್‌ ಮಾಡುತ್ತಿದ್ದರು. ಗುಂಡೇಟಿನಿಂದ ಕತ್ತಿನ ಭಾಗಕ್ಕೆ ಗಾಯವಾಗಿದ್ದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button