Top Newsಕ್ರಿಕೆಟ್ಸುದ್ದಿ

ವಿರಾಟ್‌ ಕೊಹ್ಲಿ ಮಾಲಿಕತ್ವದ ಪಬ್‌ ಮೇಲೆ ಎಫ್‌ಐಆರ್, ಅಲ್ಲೇನು ನಡೆದಿತ್ತು?

ಬೆಂಗಳೂರು: ಅವಧಿ ಮೀರಿ ಕಾರ್ಯಾಚರಿಸಿದ ಕಾರಣ, ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಎಫ್ಐಆರ್  ದಾಖಲಿಸಲಾಗಿದೆ. ರಾಜಧಾನಿಯ ಕಸ್ತೂರ್‌ಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಪಬ್ ಮಾಲೀಕತ್ವದ್ದಾಗಿದ್ದು, ರಾತ್ರಿ ಅವಧಿಗೂ ಮೀರಿ ತೆರೆದಿದ್ದುದು ಕಂಡುಬಂದಿತ್ತು.

ಜುಲೈ‌ 6ರಂದು ರಾತ್ರಿ 1.20 ವರೆಗೆ ಪಬ್ ತೆರೆದಿದ್ದು ಕಾರ್ಯಾಚರಿಸುತ್ತಿತ್ತು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರುವುದಾಗಿ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಗ್ರಾಹಕರು ಇದ್ದುದು ಕಂಡುಬಂದಿತ್ತು. ಹೀಗಾಗಿ ಅವಧಿಗೂ ಮೀರಿ ಅನಧಿಕೃತವಾಗಿ ಪಬ್ ಓಪನ್ ಇಟ್ಟ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿರಾಟ್ ಕೊಹ್ಲಿ ಅವರ One8 ಕಮ್ಯೂನ್ ರೆಸ್ಟೋರೆಂಟ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ವಲ್ಪ ದೂರದಲ್ಲಿದೆ. 2023ರಲ್ಲಿ ಗಾರ್ಡನ್ ಸಿಟಿಯಲ್ಲಿ ಈ ಪಬ್‌ ಓಪನ್‌ ಆಗಿತ್ತು. ಇಲ್ಲಿ ಕಿಟಕಿಯ ಪಕ್ಕದ ಮೇಜಿನ ಬಳಿ ಕುಳಿತರೆ ಕ್ರಿಕೆಟ್ ಸ್ಟೇಡಿಯಂ ಭಾಗಶಃ ಗೋಚರಿಸುತ್ತದೆ. ಈ ಪಬ್‌ನ ಶಾಖೆಗಳು ಮುಂಬೈ, ಪುಣೆ ಮತ್ತು ಕೋಲ್ಕತ್ತಾದಲ್ಲಿವೆ. ಈ ರೆಸ್ಟೋರೆಂಟ್ ಸರಪಳಿಯ ಎಂಟನೇ ಔಟ್‌ಲೆಟ್ ಇದಾಗಿದೆ. ಮೂರು ಮಹಡಿಗಳಲ್ಲಿ ಹರಡಿದ್ದು, ಬೋಹೀಮಿಯನ್ ಅಲಂಕಾರದೊಂದಿಗೆ ಬೆಂಗಳೂರಿನ ವಿಲಾಸಿ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ.‌

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button