Cricket : ಇಂಡಿಯನ್ ಹಾಕಿ ಟೀಂ ಪ್ಲೇಯರ್ ಮೇಲೆ ಬೆಂಗಳೂರಲ್ಲಿ ಎಫ್ ಐ ಆರ್..! ಮದುವೆಯಾಗೋದಾಗಿ ಸ್ಟಾರ್ ಆಟಗಾರ್ತಿಗೆ ಬಲತ್ಕಾರ ಪ್ರತಿಷ್ಠಿತ ಕ್ರೀಡೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಯುವತಿಯ ಮೇಲೆ ಅತ್ಯಾಚಾರ ಆರೋಪ ಭಾರತೀಯ ಹಾಕಿ ತಂಡದ ಡಿಫೆಂಡರ್ ವರುಣ್ ಕುಮಾರ್ ಮೇಲೆ ಎಫ್ ಐ ಆರ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.
ಸಂತ್ರಸ್ತ ಯುವತಿ ಜ್ಙಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರೈನಿಂಗ್ ಪಡೆಯುವಾಗ ಯುವತಿ ಪರಿಚಯ ಆಗಿದ್ದಳು. ಇನ್ಸ್ಟಾ ಗ್ರಾಂ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ವರುಣ್ ಕುಮಾರ್ ಯುವತಿ 17 ವರ್ಷದವಳಾಗಿದ್ದಾಗಲೆ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ , ಆರೋಪ ಒತ್ತಾಯಪೂರ್ವಕವಾಗಿ ಯುವತಿಯ ಜೊತೆ ಸ್ನೇಹ ಬೆಳೆಸಿದ್ದ ವರುಣ್ ಕುಮಾರ್ , ಈಗ ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು.
2019 ರಿಂದ ಯುವತಿ ಜೊತೆಗೆ ಸಂಪರ್ಕದಲ್ಲಿದ್ದ ವರುಣ್ ಕುಮಾರ್ ಐದು ವರ್ಷಗಳಿಂದ ಹಲವಾರು ಬಾರಿ ಅತ್ಯಾಚಾರ ಆರೋಪ ಈಗ ಮದುವೆಯಾಗದೇ ವಂಚನೆ ಹಿನ್ನಲೆ ಎಫ್ಐಆರ್ ದಾಖಲು ಮೂಲತಃ ಹಿಮಾಚಲ ಪ್ರದೇಶದವನಾಗಿರುವ ವರುಣ್ ಕುಮಾರ್ ಹಾಕಿಗಾಗಿಯೇ ಪಂಜಾಬ್ ಗೆ ಶಿಫ್ಟ್ ಆಗಿದ್ದ. ವರುಣ್ 2017ರಲ್ಲಿ ಭಾರತ ತಂಡದ ಪರ ಪಾದಾರ್ಪಣೆ ಮಾಡಿದ್ದ ವರುಣ್ 2022ರ ಬರ್ಮಿಂಗ್ ಹ್ಯಾಂ – ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ 2022 ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದರು.
ತಂಡದಲ್ಲಿದ್ದ ವರುಣ್ ಕುಮಾರ್ 2020 ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯ ಕಂಚಿನ ಸಾಧನೆ ಬಳಿಕ ವರುಣ್ ಕುಮಾರ್ ಗೆ 1 ಕೋಟಿ ಬಹುಮಾನ ಕೂಡ ಸಿಕ್ಕಿತ್ತು . ಹಿಮಾಚಲ ಪ್ರದೇಶ ಸರ್ಕಾರ 1 ಕೋಟಿ ಬಹುಮಾನ ಸಹ ಘೋಷಿಸಿತ್ತು. 2021 ನೇ ಸಾಲಿನ ಅರ್ಜುನ ಪ್ರಶಸ್ತಿಗೂ ವರುಣ್ ಕುಮಾರ್, ಇದೀಗ ಪ್ರೀತಿ ಪ್ರೇಮದ ಹೆಸರಲ್ಲಿ ನಂಬಿಸಿ ಅತ್ಯಾಚಾರ ಆರೋಪ ವರುಣ್ ಕುಮಾರ್ ವಿರುದ್ಧ ಪೋಕ್ಸೊ , ಅತ್ಯಾಚಾರ ಹಾಗು ವಂಚನೆ ಕೇಸ್ ನಡಿ ಎಫ್ ಐ ಆರ್ ದಾಖಲು ಮಾಡಿದ್ದಾರೆ. ಜಲಂಧರ್ ನಲ್ಲಿರೊ ವರುಣ್ ಗಾಗಿ ಜ್ಞಾನಭಾರತಿ ಪೊಲೀಸ್ರು ಬಲೆ ಬೀಸಿದ್ದಾರೆ.