ಮಾಜಿ ಸಂಸದ ಡಿಕೆ ಸುರೇಶ್ ಅವರ ಹೆಂಡತಿ ಎಂದು ಹೇಳಿಕೊಂಡು ಫೇಸ್ಬುಕ್ನಲ್ಲಿ ವಿಡಿಯೋ ಹರಿಬಿಟ್ಟ ಮಹಿಳೆ ಮೇಲೆ ದೂರು ದಾಖಲಾಗಿದೆ..
ವಿಡಿಯೋ ಹರಿಬಿಟ್ಟ ಬಿಟ್ಟ ಮಹಿಳೆ:
ನಾನು ಡಿ ಕೆ ಸುರೇಶ್ ಹೆಂಡ್ತಿಯಾಗಿ ಹೇಳ್ಬೇಕಾದ್ರೆ,ನಾನು ಮೊದಲು ಡಿ ಕೆ ಸುರೇಶ್ ಅವರಿಗೆ ದೊಡ್ಡ ಅಭಿಮಾನಿ.ಅವರು ಮೂರು ಬಾರಿ ಸಂಸದರಾಗಿ ಮಾಡಿರುವ ಕೆಲಸ ಯಾರೂ ಮಾಡಕ್ಕಾಗಲ್ಲ.ಅವರು ತುಂಬಾ ಆಕ್ಟೀವ್, ಇಂಟೆಲಿಜೆಂಟ್ ಹಾಗು ಶ್ರಮಜೀವಿ ಎಂದು ಹೇಳಿಕೊಂಡ ಮಹಿಳೆ.ಎಲ್ಲರೂ ಬಂದು ಕೋಟಿಗಟ್ಟಲೇ ದುಡ್ಡು ಮಾಡ್ಕೊಂಡು ಹೋಗ್ತಾರೆ,ಆದರೆ ಡಿಕೆ ಸುರೇಶ್ ಕೆಲಸ ಮಾಡಿದ್ದಾರೆ.ಅವರು ಮಾಡಿರುವ ಕೆಲಸವನ್ನು ಕರ್ನಾಟಕದ ಯಾವ ರಾಜಕಾರಣಿಯೂ ಮಾಡಿಲ್ಲ ಎಂದು ವಿಡಿಯೋ ಹರಿಬಿಟ್ಟಿದ್ದಾರೆ ಮಹಿಳೆ.
FIR ದಾಖಲು:
ನಾನು ಡಿ ಕೆ ಸುರೇಶ್ ಪತ್ನಿ ಎಂದ ಮಹಿಳೆ ಮೇಲೆ ರಾಮನಗರದ ಸೈಬರ್ ಅಪರಾಧಗಳ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ ಡಿಕೆ ಸುರೇಶ್ ಪರ ವಕೀಲ್ ಪ್ರದೀಪ್.ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 5ರ ಅಡಿಯಲ್ಲಿ ದೂರು..
- ಕಲಂ 237 – ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದು
- ಕಲಂ 319 – ಮತ್ತೊಬ್ಬರಂತೆ ನಟಿಸಿ ಮೋಸ ಮಾಡುವುದು
- ಕಲಂ 336 – ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿ
- ಕಲಂ 353 – ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ