ಬೆಂಗಳೂರು : ಅಸ್ಸಾಂ ನಲ್ಲಿ ಭಾರತ್ ನ್ಯಾಯ್ ಝೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಇಡೀ ದೇಶದಲ್ಲಿ ಪ್ರತಿಭಟನೆ ನಡೆಸಿತು. ಬೆಂಗಳೂರಿನಲ್ಲೂ ಸಹ ರಾಹುಲ್ ಗಾಂಧಿ ಪರ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ನಲಪಾಡ್ ರಾಹುಲ್ ಗಾಂಧಿ ಬೆಂಬಲಿಸಿ ನಗರದಲ್ಲಿ ಪಂಜಿನ ಮೆರವಣೆಗೆ ಮಾಡಿ ಪ್ರತಿಭಟಿಸಿದ್ರು.
ಸದ್ಯ ಮೆರವಣೆಗೆ ಭಾಗಿಯಾಗಿದ್ದ ಕಾಂಗ್ರೆಸ್ ಯುವ ಮುಖಂಡ ಮಹಮ್ಮದ್ ನಲ್ಪಾಡ್ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ನಲ್ಪಾಡ್ ಸೇರಿದಂತೆ 25 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ನಲಪಾಡ್ ಹಾಗೂ ಮತ್ತಿತರ ಮೇಲೆ ಎಫ್ ಐಆರ್ ದಾಖಲಾಗಿದೆ.
ಕಾಂಗ್ರೆಸ್ ಭವನದ ಬಳಿ ಅನುಮತಿ ಪಡೆಯದೆ ಗುಂಪು ಗೂಡಿ ಪ್ರತಿಭಟನೆ ಮಾಡಿದ್ದಾರೆಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಪಡಿಸಿದ ಆರೋಪ ,ಅಕ್ರಮ ಜಮಾವಣೆ, ಮೈಕ್ ಮೂಲಕ ಅನ್ಸೌಮೆಂಟ್ , ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ದೂರು ಹೈ ಗ್ರೌಂಡ್ ಠಾಣೆಯ ಇನ್ಸ್ ಪೆಕ್ಟರ್ ಭರತ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.