Friday, September 12, 2025
25 C
Bengaluru
Google search engine
LIVE
ಮನೆ#Exclusive Newsಫ್ರೀಡಂ ಟಿವಿ ಸರ್ವರ್‌ಗೆ ಕನ್ನ - ಫ್ರಾಡ್ ಕೆ.ಸಂತೋಷ್ ಅರೆಸ್ಟ್

ಫ್ರೀಡಂ ಟಿವಿ ಸರ್ವರ್‌ಗೆ ಕನ್ನ – ಫ್ರಾಡ್ ಕೆ.ಸಂತೋಷ್ ಅರೆಸ್ಟ್

ಫ್ರೀಡಂ ಟಿವಿಯ ಫೇಸ್ ಬುಕ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ಪೋಸ್ಟ್ ಮಾಡುತ್ತಿದ್ದ ಹಾಗೂ ಫ್ರೀಡಂ ಟಿವಿ ಕಂಪ್ಯೂಟರ್ ವ್ಯವಸ್ಥೆಗೆ ಕನ್ನ ಹಾಕಲು ಮುಂದಾಗಿದ್ದ ಕೆ.ಸಂತೋಷ್ S/O ಕೋದಂಡರಾಮ ಎಂಬ ವಂಚಕನ ವಿರುದ್ಧ FIR ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಸೈಬರ್ ವಂಚಕ ಕೆ.ಸಂತೋಷ್ ಹಲವು ಸುದ್ದಿವಾಹಿನಿಗಳಲ್ಲಿ ಕೆಲಸ ಮಾಡಿದ್ದ. ಅಲ್ಲದೆ ಈ ವಂಚಕ ಗ್ಯಾಲಾಕ್ಸಿಟಿವಿ ಕನ್ನಡ ಎಂಬ ಯೂಟ್ಯೂಬ್ ಚಾನೆಲ್ ಮಾಡಿಕೊಂಡಿದ್ದ. ಈತ ಬೆಂಗಳೂರಿನ ವಿರೂಪಾಕ್ಷಪುರದ ಗಣೇಶ ನಗರದಲ್ಲಿ ವಾಸವಾಗಿದ್ದ.

ಹುಟ್ಟಾ ವಂಚಕನಾದ ಈತ ಆಫೀಸ್ ಪಾಸ್‌ವರ್ಡ್‌ಗಳನ್ನು ಕದ್ದು ಹ್ಯಾಕಿಂಗ್ ಸಾಫ್ಟ್‌ವೇರ್‌ಗಳನ್ನು ಬಳಸಿ ಫ್ರೀಡಂ ಟಿವಿಯ ಫೇಸ್ ಬುಕ್ ಹ್ಯಾಕ್ ಮಾಡಿಸಿ ಅಶ್ಲೀಲ ವಿಡಿಯೋ ಅಪ್‌ಲೋಡ್ ಮಾಡಿದ್ದ.. ಅಲ್ಲದೆ ಫ್ರೀಡಂ ಟಿವಿಯ ಸರ್ವರ್ ವ್ಯವಸ್ಥೆ ವಿಫಲಗೊಳಿಸಲು ಪ್ರಯತ್ನಿಸಿದ್ದ.

Galaxytvkannada4@gmail.com ಎಂಬ ಇಮೇಲ್ ಐಡಿ ಮೂಲಕ ತಡರಾತ್ರಿ ಹೊತ್ತಲ್ಲಿ ಸರ್ವರ್ ಪ್ರವೇಶಿಸಿ ಡಾಟಾ ನಾಶ ಹಾಗೂ ಟಿವಿ ವಾಹಿನಿಯ ಇಡೀ ಪ್ರಸಾರ ವ್ಯವಸ್ಥೆಯನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದ. ಕೂಡಲೇ ಎಚ್ಚೆತ್ತ ಫ್ರೀಡಂ ಟಿವಿಯ ಐಟಿ ಸಿಬ್ಬಂದಿ ಆತನ ಪ್ರಯತ್ನವನ್ನು ವಿಫಲಗೊಳಿಸಿ ಸೈಬರ್ ಠಾಣೆಯಲ್ಲಿ FIR ದಾಖಲಿಸಿದ್ದರು.

ಪ್ರಕರಣದ ಪ್ರಿಲಿಮಿನರಿ ಎನ್‌ಕ್ವೈರಿ ನಡೆಸಿದ ಎಸಿಪಿ ಹೇಮಂತ್ ಕುಮಾರ್, ಹಾಗೂ ಇನ್ಸ್‌ಪೆಕ್ಟರ್ ಸುರೇಶ್ ಅವರು ಐಟಿ ACT 2008 ಅಡಿ ಕೇಸ್ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.  ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸಂತೋಷ್​​​​ನನ್ನು ಬಂಧಿಸಿದ್ದಾರೆ.

ಈತನ ಜೊತೆ ಕೃತ್ಯದಲ್ಲಿ ಭಾಗಿಯಾದ ಇತರರ ಬಗ್ಗೆಯೂ ತನಿಖೆ ಮುಂದುವರೆದಿದೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments