Wednesday, January 28, 2026
16.4 C
Bengaluru
Google search engine
LIVE
ಮನೆ#Exclusive NewsTop Newsಗೋಲ್ಡ್​ಲೋನ್ ಗೋಲ್ಮಾಲ್? ಬ್ಯಾಂಕ್​ಗಳು-ಸಾಲ ಪಡೆದವರಿಗೆ ಮೋದಿ ಶಾಕ್!

ಗೋಲ್ಡ್​ಲೋನ್ ಗೋಲ್ಮಾಲ್? ಬ್ಯಾಂಕ್​ಗಳು-ಸಾಲ ಪಡೆದವರಿಗೆ ಮೋದಿ ಶಾಕ್!

ದೇಶದಲ್ಲಿ ಗೋಲ್ಡ್ ಲೋನ್ ಗೋಲ್ಮಾಲ್ ನಡೆದಿದ್ಯಾ ಎಂಬ ಪ್ರಶ್ನೆ ಇದೆ. ಇದೇ ಅನುಮಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ಯಾಂಕ್​ಗಳು ಮತ್ತು ಗೋಲ್ಡ್ ಲೋನ್ ಪಡೆದವರಿಗೆ ಶಾಕ್ ನೀಡಿದೆ.

ದೇಶಿಯವಾಗಿ ಚಿನ್ನದ ಬೆಲೆ (Gold Price)ವಿಪರೀತವಾಗಿ ಹೆಚ್ಚುತ್ತಿದೆ. ಇದೇಮೊದಲ ಬಾರಿಗೆ 66,000 ರೂಪಾಯಿಯ ಗಡಿ ದಾಟಿದೆ. ಇದು ಈ ವರ್ಷದ ಕೊನೆಗೆ 72 ಸಾವಿರ ರೂಪಾಯಿಗೆ ತಲುಪಿದರೂ ಅಚ್ಚರಿ ಇಲ್ಲ. ಈ ವರ್ಷ ಚಿನ್ನದ ಬೆಲೆ ಶೇಕಡಾ 16.6ರಷ್ಟು ಹೆಚ್ಚಾಗಿದೆ. ಆದರೂ ಮದುವೆ ಸೀಸನ್ ಕಾರಣ ಚಿನ್ನದ ಖರೀದಿಯೂ ಹೆಚ್ಚುತ್ತಿದೆ.

ಗಮನಿಸಬೇಕಾದ ವಿಚಾರ ಇದೇ ಹೊತ್ತಲ್ಲಿ ಚಿನ್ನದ ಮೇಲಿನ ಸಾಲದ ಪ್ರಮಾಣವೂ ದೇಶದಲ್ಲಿ ವಿಪರೀತವಾಗಿ ಹೆಚ್ಚುತ್ತಿದೆ.. ಬ್ಯಾಂಕ್​ಗಳಲ್ಲಿ ಚಿನ್ನವನ್ನು ಅಡವಿಟ್ಟು ಜನ ಸಾಲ ಪಡೆದ ಮೊತ್ತ (Bank Loans against Gold jewellery)ಬರೋಬ್ಬರಿ 1,01,934 ಕೋಟಿ ರೂಪಾಯಿ.

ಸಾಮಾನ್ಯವಾಗಿ ಖರೀದಿ, ಗಿರವಿ ಏಕಕಾಲದಲ್ಲಿ ಹೆಚ್ಚಳ ಆಗುವುದಿಲ್ಲ. ಆದರೂ, ದೇಶದಲ್ಲಿ ಚಿನ್ನದ ಖರೀದಿ ಜೊತೆಗೆ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವ ಪ್ರಮಾಣವೂ ಹೆಚ್ಚುತ್ತಿದೆ. ಜೊತೆಗಿನ ಹಿಂದಿನ ಸಾಲಕ್ಕೆ ಟಾಪ್ ಅಪ್​ ಲೋನ್​ಗಳನ್ನು ನೀಡಲಾಗುತ್ತಿದೆ. ಇದನ್ನು ಕೇಂದ್ರ ವಿತ್ತ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಗೋಲ್ಡ್ ಲೋನ್​ಗಳ ನೀಡಿಕೆಯಲ್ಲಿ ಗೋಲ್ಮಾಲ್ ನಡೆದಿದ್ಯಾ ಎಂಬ ಅನುಮಾನದ ಮೇಲೆ ಪರಿಶೀಲನೆ ನಡೆಸಲು ಮುಂದಾಗಿದೆ

ಹೀಗಾಗಿಯೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಗೆ ಫೆಬ್ರವರಿ 27ರಂದು ಪತ್ರ ಬರೆದಿರುವ ಕೇಂದ್ರ ವಿತ್ತ ಸಚಿವಾಲಯ, ಕಳೆದ ಎರಡು ವರ್ಷದಲ್ಲಿ ನೀಡಲಾದ ಚಿನ್ನದ ಮೇಲಿನ ಸಾಲಗಳನ್ನು ಪರಿಶೀಲಿಸುವಂತೆ ಸೂಚಿಸಿದೆ. 2022ರ ಜನವರಿ ಒಂದರಿಂದ ಈವರೆಗೂ ನೀಡಲಾದ ಚಿನ್ನದ ಅಡಮಾನ ಸಾಲ, ಅಡಮಾನ ಮೌಲ್ಯ, ಕಲೆಕ್ಷನ್ ಚಾರ್ಜ್​ಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಎಂದು ಆದೇಶಿಸಿದೆ.ಅದರಲ್ಲೂ ಸಾಲಗಳ ಎವರ್​ಗ್ರೀನಿಂಗ್​ ಹೆಚ್ಚುತ್ತಿದ್ಯಾ? ಮನವಿ ಇಲ್ಲದೇ ಟಾಪ್ ಅಪ್ ಲೋನ್ (Top up Loans) ನೀಡಲಾಗುತ್ತಿದ್ಯಾ? ಪದೇ ಪದೇ ನಿರ್ದಿಷ್ಟ ವ್ಯಕ್ತಿಗಳಿಗೆ ಸಾಲ ನೀಡಲಾಗುತ್ತಿದ್ಯಾ? ಎಂಬುದನ್ನು ತನಿಖೆ ಮಾಡಿ ಎಂದಿದೆ.

ಏನಿದು ಎವರ್​ಗ್ರೀನಿಂಗ್ ಲೋನ್? ಪರಿಣಾಮ ಏನು? (Evergreening Loan)

ಎವರ್​ಗ್ರೀನಿಂಗ್ ಲೋನ್ – ಇದು ವ್ಯಕ್ತಿ, ಉದ್ದಿಮೆಗಳಿಗೆ ಹೊಂದಿಕೊಳ್ಳುವ ಹಣಕಾಸು ಆಯ್ಕೆಗಳನ್ನು ಎದಗಿಸುತ್ತದೆ. ಸಾಲ ಪಡೆದವರಿಗೆ ಮೂಲ ಮರುಪಾವತಿಯನ್ನು ಮುಂದೂಡಲು ಅವಕಾಶ ನೀಡುವ.. ಸಾಲ ಮರುಪಾವತಿ ಮಾಡುವ ಅಗತ್ಯ ಇಲ್ಲದೇ ನಿರಂತರವಾಗಿ ಸಾಲ ಪಡೆದಿರುವಂತೆ ತೋರಿಸುವ ಪ್ರಕ್ರಿಯೆ ಆಗಿದೆ.

ಹೊಸ ಸಾಲಗಳನ್ನು ವಿಸ್ತರಣೆ ಮಾಡುವುದನ್ನು ಅಥವಾ ಅಸ್ತಿತ್ವದಲ್ಲಿರುವ ಸಾಲ ಮರುಪಾವತಿಸಲು ಒದ್ದಾಡುತ್ತಿರುವ ಸಾಲಗಾರನಿಗೆ ಹೆಚ್ಚುವರಿ ಸಾಲ ಒದಗಿಸುವ ಪ್ರಕ್ರಿಯೆ ಆಗಿದೆ. ಬ್ಯಾಂಕ್‌ಗಳು ಸಾಮಾನ್ಯವಾಗಿ ಸಾಲಗಳನ್ನು ನಿಷ್ಕ್ರಿಯ ಎಂದು ವರ್ಗೀಕರಿಸುವುದನ್ನು ತಡೆಯಲು ಈ ತಂತ್ರ ಬಳಸುತ್ತವೆ.

ಇದು ಸಾಲಗಾರ ಮತ್ತು ಬ್ಯಾಂಕ್‌ನ ಆರ್ಥಿಕ ಆರೋಗ್ಯವನ್ನು ಮರೆಮಾಚುತ್ತದೆ.ಇದು ಬ್ಯಾಂಕ್‌ಗಳ ಕಾರ್ಯಕ್ಷಮತೆ ಮತ್ತು ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments