Tuesday, April 29, 2025
30.4 C
Bengaluru
LIVE
ಮನೆರಾಜ್ಯಇನ್ಮುಂದೆ ವಿಧಾನಸೌಧ ನೋಡೋಕು ದುಡ್ಡು..

ಇನ್ಮುಂದೆ ವಿಧಾನಸೌಧ ನೋಡೋಕು ದುಡ್ಡು..

ವಿಧಾನಸೌಧ ಒಳಗೆ ಹೋಗಿ ನೋಡ್ಬೇಕಾ? ಹಣ ಕಟ್ಟಿ ನೋಡ್ಕೊಂಡು ರೌಂಡ್ ಹಾಕಿ ಬನ್ನಿ. ಇನ್ಮುಂದೆ ವಿಧಾನಸೌಧದ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಲಾಗ್ತಿದೆ

ರಾಷ್ಟ್ರಪತಿ ಭವನ ಮಾದರಿಯಲ್ಲಿ ಗೈಡೆಡ್ ಟೂರ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ರಜಾ ದಿನಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 6 ಗಂಟೆ ತನಕ ವಿಧಾನಸೌಧದೊಳಗೆ ಹೋಗಿ ನೋಡಬಹುದು. ಆನ್‌ಲೈನ್ ಮೂಲಕ ಬುಕ್ ಮಾಡಿ, ದುಡ್ಡು ಕಟ್ಟಿ ವಿಧಾನಸೌಧ ರೌಂಡ್ ಹಾಕಬಹುದು. ಇದೇ ಮೊದಲ ಬಾರಿಗೆ Guided Tour ವ್ಯವಸ್ಥೆ ತರುತ್ತಿದ್ದು, ಪ್ರವಾಸೋದ್ಯಮ ಇಲಾಖೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿ ಡಿಪಿಎಆರ್ ಅಧಿಕೃತ ಆದೇಶ ಹೊರಡಿಸಿದೆ.

ಆನ್‌ಲೈನ್ ಬುಕ್ಕಿಂಗ್, ಆನ್‌ಲೈನ್ ಟಿಕೆಟ್ ಖರೀದಿ ಮಾಡಬಹುದು. ತಲಾ 30 ಜನರ ಟೀಂ ಮಾಡಿಕೊಂಡು ಹೋಗಬಹುದು. ಪ್ರವಾಸೋದ್ಯಮ ಇಲಾಖೆಯಿಂದಲೇ ಟೂರಿಸ್ಟ್ ಆಫೀಸರ್ ನೇಮಕ‌ ಮಾಡಿರುತ್ತಾರೆ. ಆಯಾ ದಿನವೇ ವಿಧಾನಸೌಧ ಭದ್ರತಾ ಸಿಬ್ಬಂದಿ ವಿಭಾಗಕ್ಕೆ ಪ್ರವಾಸಿಗರ ಭೇಟಿ, ಸಂಖ್ಯೆ ವಿವರ ಸಲ್ಲಿಸಬೇಕು.

ಪ್ರವಾಸಿಗರ ಗುರುತಿನ ಚೀಟಿ ಚೆಕ್ ಮಾಡಿ, ಆನ್‌ಲೈನ್ ಟಿಕೆಟ್ ಇದ್ದವರಿಗೆ ವಿಧಾನಸೌಧಕ್ಕೆ ಪ್ರವೇಶಕ್ಕೆ ಅವಕಾಶ ಇರಲಿದೆ. ಪ್ರವೇಶ ಶುಲ್ಕವನ್ನ ನಿಗದಿ ಮಾಡಲಿರುವ ಪ್ರವಾಸೋದ್ಯಮ ಇಲಾಖೆ, ಯಾವಾಗಿನಿಂದ ಜಾರಿ, ಯಾವ ಪೋರ್ಟಲ್ ಮೂಲಕ ಟಿಕೆಟ್ ಪಡೆಯಬೇಕೆಂಬ ಮಾರ್ಗಸೂಚಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments