ಸರ್ಕಾರದ ಗ್ಯಾರಂಟೀ ಯೋಜನೆಯ ಮತ್ತೊಂದು ಎಫೆಕ್ಟ್ ಇದೀಗ ಮಕ್ಕಳ ಮೇಲೂ ಬೀರುತ್ತಿದೆ. ಗ್ಯಾರಂಟೀ ಗುಂಗಿನಲ್ಲಿ ಸರ್ಕಾರ ಶಿಕ್ಷಣದ ಬಗ್ಗೆ ಕೇರ್ ಲೆಸ್ ಮಾಡ್ತಿದೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. SSLC ಶುಲ್ಕ ಕಿರಿಕ್ ಬಳಿಕ ಈಗ ಪಿಯುಸಿ ಪರೀಕ್ಷೆಗಳಿಗೂ ಪರೀಕ್ಷಾ ಶುಲ್ಕ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಮುಂದಾಗಿರುವ ನಡೆಗೆ ಇದೀಗ ಪೋಷಕರಿಂದ ವಿರೋಧ ಶುರುವಾಗಿದೆ.
ಕಳೆದ ವರ್ಷ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ (Education Department)ಇಲಾಖೆ ಪ್ರತಿ ವಿದ್ಯಾರ್ಥಿಯಿಂದ 50 ರೂಪಾಯಿ ಸಂಗ್ರಹಿಸಿ ವಿರೋಧಕ್ಕೆ ಕಾರಣವಾಗಿತ್ತು. ವ್ಯಾಪಕ ವಿರೋಧದ ಬಳಿಕ ಶುಲ್ಕ ಕೈಬಿಟ್ಟು ಸರ್ಕಾರವೇ (Karnataka Government)ಹಣ ನೀಡಿತ್ತು. ಈಗ ಪ್ರಸ್ತಕ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಪರೀಕ್ಷ ಮಂಡಳಿಯೇ ಪ್ರಶ್ನೆಯ ಪತ್ರಿಕ ನೀಡುತ್ತಿದ್ದು ಶುಲ್ಕ ಪಡೆಯಲು ಮುಂದಾಗಿದೆ. ಈ ನಿರ್ಧಾರಕ್ಕೆ ಪೋಷಕರ ಸಮನ್ವಯ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಮಂಡಳಿಗೆ ಪತ್ರ ಬರೆದು ಮನವಿ ಮಾಡಿದೆ.
ಪ್ರಥಮ ಹಾಗೂ ದ್ವಿತೀಯ PUC ಮಧ್ಯ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳಿಂದ ಶುಲ್ಕ ಸಂಗ್ರಹಕ್ಕೆ ಪರೀಕ್ಷಾ ಮಂಡಳಿ ಮುಂದಾಗಿದೆ. 2024 -25ನೇ ಸಾಲಿನಲ್ಲಿ ಪಿಯುಸಿ ಪ್ರಥಮ ಹಾಗೂ ಎರಡನೇ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದಶನದಂತೆ ಜಿಲ್ಲಾ ನಿರ್ದೇಶಕ ಹಾಗೂ ಉಪನಿರ್ದೇಶಕರ ಹಂತದಲ್ಲಿ ಮಧ್ಯ ವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಮುಂದಾಗಿದೆ. ಇದನ್ನ ಪ್ರಿಂಟ್ ಮಾಡಿ ಆಯಾ ವ್ಯಾಪ್ತಿಯ ಕಾಲೇಜುಗಳು ಪರೀಕ್ಷೆಗೆ ಏಕಕಾಲಕ್ಕೆ ಮಕ್ಕಳಿಗೆ ನೀಡಬೇಕಿದೆ. ಇದಕ್ಕೆ ತಗುಲುವ ವೆಚ್ಚವನ್ನ ಶಾಲಾ ಶಿಕ್ಷಣ ಇಲಾಖೆ ಶುಲ್ಕ ರೂಪದಲ್ಲಿ ವಿದ್ಯಾರ್ಥಿಗಳಿಂದಲೇ ವಸೂಲಿಗೆ ಮುಂದಾಗಿದೆ.