ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಒಬ್ಬಂಟಿ ಯುವತಿ ಮುಂದೆ ಕಾಮುಕ ಫಯಾಜ್ ಪಾಷಾ ತನ್ನ ಮರ್ಮಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಸುರಕ್ಷತೆ ಕಡಿಮೆಯಾಗುತ್ತಿದೆ ಎಂಬ ಆತಂಕ ತಲೆದೋರಿದ ನಡುವೆಯೇ ಪ್ರಸಿದ್ಧ ಪ್ರವಾಸಿ ಹಾಗೂ ವಿಹಾರ ತಾಣವಾದ ಕಬ್ಬನ್ ಪಾರ್ಕ್‌ನಲ್ಲಿ ಒಬ್ಬ ಕಾಮುಕ ಬೀಡು ಬಿಟ್ಟಿದ್ದಾನೆ. ಈತ ಒಬ್ಬಂಟಿಯಾಗಿ ಹೋಗುವ ಯುವತಿಯರು, ಮಹಿಳೆಯರು ಹಾಗೂ ಹೆಣ್ಣುಮಕ್ಕಳನ್ನು ಕಂಡರೆ ತನ್ನ ಮರ್ಮಾಂಗವನ್ನು ತೋರಿಸಿ ಕಾಮಕ್ಕೆ ಆಹ್ವಾನಿಸುತ್ತಾನೆ. ಹೀಗಾಗಿ, ಒಬ್ಬಂಟಿಯಾಗಿ ಮಹಿಳೆಯರು, ಯುವತಿಯರು ಕಬ್ಬನ್ ಪಾರ್ಕ್‌ಗೆ ಹೋಗುವ ಮುನ್ನ ಎಚ್ಚರವಾಗಿರಿ. ಬೆಂಗಳೂರಿನ ಕಬ್ಬನ್ ಪಾರ್ಕ್ ವಾಯುವಿಹಾರಕ್ಕೆ ಬರುವ ಯುವತಿಯರೇ ಎಚ್ಚರವಾಗಿರಿ. ಕಬ್ಬನ್ ಪಾರ್ಕ್ ನಲ್ಲಿದ್ದಾನೊಬ್ಬ ಕಾಮುಕನಿದ್ದಾನೆ. ಒಬ್ಬಂಟಿಯಾಗಿ ಓಡಾಡೋ ಯುವತಿಯರನ್ನ ಟಾರ್ಗೇಟ್ ಮಾಡೋ ಕಾಮುಕ, ಒಬ್ಬಂಟಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತನೆ ತೋರುತ್ತಾನೆ. ಕಬ್ಬನ್‌ಪಾರ್ಕಿನ ಸೆಂಟ್ರಲ್ ಲೈಬ್ರರಿ ಮುಂದೆ ಯುವತಿಯೊಬ್ಬಳು ನಿಂತಿದ್ದಾಗ ಈತ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ, ಯುವತಿಯ ಮುಂದೆಯೇ ತನ್ನ ಖಾಸಗಿ ಅಂಗವನ್ನು ತೋರಿಸಿ, ಆ ಯುವತಿಯ ಬಟ್ಟೆ ಹಿಡಿದು ಕಾಮಕೇಳಿಗೆ ಎಳೆದೊಯ್ಯಲು ಪ್ರಯತ್ನಿಸಿದ್ದಾನೆ.