Friday, August 22, 2025
24.8 C
Bengaluru
Google search engine
LIVE
ಮನೆ#Exclusive NewsTop Newsಮುಖೇಶ್ ತ್ಯಾಗಿ ನೇತೃತ್ವದಲ್ಲಿ ಬಿಎಸ್‌ಎಫ್ ಯೋಧರಿಗೆ ಬೀಳ್ಕೊಡುಗೆ ಪಥಸಂಚಲನ

ಮುಖೇಶ್ ತ್ಯಾಗಿ ನೇತೃತ್ವದಲ್ಲಿ ಬಿಎಸ್‌ಎಫ್ ಯೋಧರಿಗೆ ಬೀಳ್ಕೊಡುಗೆ ಪಥಸಂಚಲನ

ಪರಿಶ್ರಮ ಮತ್ತು ಸಾಧನೆಯಿಂದ ದೇಶದ ಗಡಿ ಕಾಯಲು ಸಜ್ಜಾದ ಬಿಎಸ್‌ಎಫ್ ಯೋಧರ ಪಥಸಂಚಲನ ಉತ್ತಮವಾಗಿ ಮೂಡಿಬಂದಿದ್ದು, ಯಲಹಂಕ ಬಿಎಸ್‌ಎಫ್ ತರಬೇತಿ ಕೇಂದ್ರದಲ್ಲಿ ನೂತನ ಬಿಎಸ್‌ಎಫ್ ಯೋಧರ ನಿರ್ಗಮನ ಪಥ ಸಂಚಲನ, ಸಂಭ್ರಮದಿಂದ ನಡೆಯಿತು.

ಭಾರತದ ವಿವಿಧ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಲು ನೂತನ ಯೋಧರನ್ನು ಯಲಹಂಕದ ಬಾಗಲೂರು ಕ್ರಾಸ್ನಲ್ಲಿ ಇರುವ ಬಿಎಸ್ಎಫ್ ಪರೇಡ್ ಮೈದಾನದಲ್ಲಿ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿದ್ದಾರೆ. ವಿವಿಧ ಹಂತಗಳಲ್ಲಿ ತರಬೇತಿ ಪಡೆದ ಬ್ಯಾಚ್ ನಂ 600. 601ರ 464 ಯೋಧರು ಸೇವೆ ಸಲ್ಲಿಸಲು ಗಡಿಗೆ, ನಿಯೋಜನೆಗೊಂಡು ಸಮಾರೋಪ ಸಮಾರಂಭ ಯಲಹಂಕದ ತರಬೇತಿ ಕೇಂದ್ರದಲ್ಲಿ ನಡೆಯಿತು. ಭಾರತದ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಲು 464 ನೂತನ ಯೋಧರು ಸನ್ನದ್ದರಾಗಿ ನುರಿತ ತರಬೇತಿಯೊಂದಿಗೆ ದೇಶ ಕಾಯಲು ಹೊರಟ ಯೋಧರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಬಿಎಸ್ ಎಫ್ ಐಜಿ ಆಫಿಸರ್ ಮುಖೇಶ್ ತ್ಯಾಗಿ ನೇತೃತ್ವದಲ್ಲಿ ನಿರ್ಗಮನ ಪಥ ಸಂಚಲನ, ಅದ್ದೂರಿಯಾಗಿ ನಡೆಯಿತು. ಬಿಎಸ್‌ಎಫ್ ಐಜಿ ಮುಖೇಶ್ ತ್ಯಾಗಿ ಮಾತನಾಡಿ, ದೇಶದ ಗಡಿ ಕಾಯುವುದು ಸುಲಭದ ಕೆಲಸವಲ್ಲ, ರಾತ್ರಿ ಹಗಲು ಎನ್ನದೆ ದೇಶ ಕಾಯುವ ಯೋಧ ದೇಶದ ಬೆನ್ನೆಲುಬು ದೇಶದೊಳಗೆ ದೇಶದ ಗಡಿ ಕಾಯುವ ಯೋಧ ದೇಶದ ಬೆನ್ನೆಲುಬು ಎಂದು ಹೇಳಿದರು. ತರಬೇತಿ ನೀಡಿದ ಪ್ರಶಿಕ್ಷಣಾರ್ಥಿಗಳನ್ನು ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಇನ್ನು ಕಾರ್ಯಕ್ರಮದಲ್ಲಿ ಯೋಧರ ಸಾಹಸ ದೃಶ್ಯಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments