ಕಾಂತಾರ’ ಚಿತ್ರದಿಂದ ಬೇಡಿಕೆ ಪಡೆದ ನಟಿ ಸಪ್ತಮಿ ಗೌಡ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸಕ್ರಿಯರಾಗಿರ್ತಾರೆ . ಆಗಾಗ ತಮ್ಮ ಸುಂದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಬ್ಲ್ಯಾಕ್ ಟಾಪ್ ಹಾಗೂ ಪ್ಯಾಂಟ್ ಹಾಕ್ಕೊಂಡಿರೋ ಫೋಟೋ ಶೇರ್ ಮಾಡಿದ್ದರು.ಅ ಫೋಟೋ ನಿಮಿಷಾರ್ಧದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿತ್ತು.
ಫುಲ್ ಸ್ಲೀವ್ ಬ್ಲ್ಯಾಕ್ ಶರ್ಟ್‌ನಲ್ಲಿ ಕಾಂತಾರ ಬ್ಯೂಟಿ ಮುದ್ದಾಗಿ ಕಾಣುತ್ತಿದ್ದಾರೆ. ಓಪನ್ ಹೇರ್‌ನಲ್ಲಿ ಸ್ಟೈಲಿಶ್ ಆಗಿ ಫೋಟೋಗಳಿಗೆ ಫೋಸ್ ನೀಡಿದ್ದಾರೆ. ನೆಟ್ಟಿಗರು ಫೋಟೋಗಳಿಗೆ ಲೈಕ್ಸ್ ಹಾಗೂ ಹಾರ್ಟ್ ಎಮೋಜಿ ಸೆಂಡ್ ಮಾಡಿದ್ದಾರೆ. ವಾವ್ , ಅಬ್ಬಬ್ಬಾ , ಕ್ಯೂಟ್, ನೈಸ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.ಮತ್ತೆ ಕೆಲವರು, ‘ಯುವ ಸಿರಿ’ ಎಂದು ಹೊಗಳಿದ್ದಾರೆ. ಇನ್ನು ಹಲವರು ‘ಲೀಲಾ’, ಯುವರಾಣಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವರು, ‘ಮೂಗು ಬೊಟ್ಟು ಇಲ್ದೆ ನೀವ್ ಚೆನ್ನಾಗಿ ಕಾಣ್ತಿಲ್ಲ ‘ ಎಂದು ಹೇಳಿದ್ದಾರೆ.
ಮತ್ತೆ ಕೆಲವು ಮಂದಿ ‘ಇನ್ನೂ ಸಣ್ಣ ಆಗ್ಬೇಡಿ’, ಏನಿದು ಹಿಂಗೆ ಎಂದು ಸಪ್ತಮಿ ಗೌಡ ಸಡನ್ ಸ್ಲಿಮ್ ಆಗಿರೋದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ಮಂದಿ ಕಾಸ್ಟ್ಯೂಮ್‌ನ್ನು ಟೀಕಿಸಿದ್ದಾರೆ. ಡ್ಯಾಡ್ಸ್ ಪ್ಯಾಂಟ್ ಎಂದು ಕಾಲೆಳೆದಿದ್ದಾರೆ. ಒಟ್ಟಾರೆ ಬಿಳಿ ಸುಂದರಿ ದೇಹಕ್ಕೆ ಕಪ್ಪು ಬಟ್ಟೆ ಅಂದಕ್ಕೆ ಅಲಂಕಾರ ಮಾಡಿದಂತಿತ್ತು.