Thursday, November 20, 2025
19.1 C
Bengaluru
Google search engine
LIVE
ಮನೆರಾಜಕೀಯಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ತಲೆ ಎತ್ತುತ್ತಿವೆ; ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳು ತಲೆ ಎತ್ತುತ್ತಿವೆ; ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ‌ಮತಾಂಧ ಶಕ್ತಿಗಳು ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿ  ಮಾತನಾಡಿದ ಅವರು, ಮೈಸೂರಿನ ಉದಯಗಿರಿಯಲ್ಲಾದ ಘಟನೆ ಪೂರ್ವ ತಯಾರಿಯಿಂದ ಆಗಿದೆ. ಇದು ಸಂಪೂರ್ಣ ತನಿಖೆಯಾಗಬೇಕು. ಇದು ಅತ್ಯಂತ ಗಂಭೀರವಾದ ವಿಷಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಿಎಫ್‌ಐ, ಎಸ್‌ಡಿಪಿಐ, ಕೇಸ್ ವಾಪಸು ಪಡೆದ್ರು. ಹಳೆ ಹುಬ್ಬಳ್ಳಿ ಕೇಸ್ ವಾಪಸಾತಿಯಿಂದ ಅವರಿಗೆ ದೊಡ್ಡ ಕುಮ್ಮಕ್ಕು ಬಂದಿದೆ. ಇಸ್ಲಾಂ ಮತಾಂಧ ಶಕ್ತಿಗಳು ಕಾಂಗ್ರೆಸ್ ಬೆಂಬಲದಿಂದ ಈ‌ ರೀತಿಯಲ್ಲಿ ‌ವರ್ತನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಎಡಬಿಡಂಗಿತನದಿಂದ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಇಲ್ಲ‌. ನಮ್ಮ ರಾಜ್ಯದಲ್ಲಿ ಸಹ ನಿಮ್ಮನ್ನು ಕಿತ್ತೊಗೆಯುತ್ತಾರೆ. ಕಾಂಗ್ರೆಸ್ ನವರಿಗೆ ಮುಸ್ಲಿಂ ಅವರು ಮಾತ್ರ ಬೇಕಾ? ಈ‌ ಘಟನೆಯನ್ನು ಸಹ ಕಾಂಗ್ರೆಸ್ ಇದನ್ನು ತುಷ್ಟೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಗೃಹ ಸಚಿವರು ತಮ್ಮ ಐಡಿಯಾಲಜಿಗೆ ತಕ್ಕಂತೆ ಮಾತನಾಡನಾಡುತ್ತಾರೆ. ಸಾರ್ವಜನಿಕರ ಆಸ್ತಿ ನಷ್ಟ ಬರಿಸೋರು ಯಾರು? ಅತೀ ಹೆಚ್ಚು ಹಿಂದೂಗಳು ತೆರಿಗೆ ನೀಡುತ್ತಾರೆ. ಗಲಭೆಕೋರರಿಂದ ಆಸ್ತಿ ನಷ್ಟವನ್ನು ಒದ್ದು ವಸೂಲಿ ಮಾಡಬೇಕು. ಸರ್ಕಾರಕ್ಕೆ ತಾಕತ್ತು ಇದ್ದ್ರೆ ಇದನ್ನು ಮಾಡಲಿ. ಇದು ಕಮ್ಯುನಿಸ್ಟ್, ಕೇರಳ ಬೆಂಬಲ ಇಲ್ಲದ ಈ ರೀತಿ ನಡೆಯಲ್ಲ. ಕಾಂಗ್ರೆಸ್ ನಾಯಕರು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕೆಂದರು. ಆರ್ ಎಸ್ ಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ, ಮತಾಂಧ ಶಕ್ತಿ ವ್ಯವಸ್ಥಿತ ಪ್ಲಾನ್ ಮಾಡಿಕೊಂಡು ಈ ರೀತಿಯಲ್ಲಿ ಮಾಡಿದ್ದಾರೆ ಎಂದು ಜೋಷಿ ಕಿಡಿ ಕಾರಿದರು. ಇದೇ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಾರ್ಟಿ ಪರಸ್ಪರ ಭಿನ್ನಾಭಿಪ್ರಾಯದಿಂದ ಆಡಳಿತದ ಮೇಲೆ ದುಷ್ಪರಿಣಾಮ ಬೀರಿದೆ. ದಲಿತ ಸಿಎಂ ಆಗಲು ನಮ್ಮ ವಿರೋಧ ಇಲ್ಲ. ಆದರೆ, ಇದನ್ನು ಹಾದಿ‌ ಬೀದಿ ರಂಪ ಮಾಡಿ ಆಡಳಿತಯಂತ್ರ ಕುಸಿಯುವಂತೆ ಮಾಡಿದೆ. ಇದನ್ನು ನಾವು ಸಹಿಸಲು ಆಗಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡ ಅವರು, ರಾಹುಲ್ ಗಾಂಧಿ ಸಿರಿಯಸ್‌ ರಾಜಕಾರಣಿ ಅಲ್ಲ. ಅವರ ಬಗ್ಗೆ ಹೆಚ್ಚು ಮಾತನಾಡೋ ಅವಶ್ಯಕತೆ ಇಲ್ಲ. ಇದೇ ಅದಾನಿ, ಅಂಬಾನಿ ಅಂತ ಎಷ್ಟು ವರ್ಷ ತೆಗೆದುಕೊಂಡು ಹೋಗುತ್ತಿರಿ. ಕೃಷಿ, ಸಣ್ಣ, ದೊಡ್ಡ ವ್ಯಾಪಾರ ದೇಶಕ್ಕೆ ‌ಬೇಕು. ಇದನ್ನು ಬಿಟ್ಟು ಅಂಬಾನಿ, ಅದಾನಿಗೆ ಏನು ವಿಶೇಷ ಸವಲತ್ತು ನೀಡಿದೆ‌ ಹೇಳಿ ಅಂತಾ ಪ್ರಹ್ಲಾದ್ ಜೋಶಿ ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments