ತಮ್ಮ ನೆಚ್ಚಿನ ಸಿನಿಮಾ ತಾರೆಯರನ್ನ ,ಕ್ರೀಡಾ ಪಟುಗಳನ್ನ ,ನೆಚ್ಚಿನ ರಾಜಕಾರಣಿಗಳನ್ನ ಸ್ವಂತ ಬಂಧುಗಳಿಗಿಂತಲೂ ಹೆಚ್ಚಾಗಿ ಪ್ರೀತಿಸೋ ಅಭಿಮಾನಿಗಳಿರುತ್ತಾರೆ ,ತನ್ನ ನೆಚ್ಚಿನ ಸೆಲೆಬ್ರಿಟಿಯ ಪ್ರತಿಯೊಂದನ್ನ ಅನುಕರಿಸಿ, ಎಲ್ಲರ ಮದ್ಯೆ ತನ್ನ ನೆಚ್ಚಿನ ನಾಯಕನನ್ನ ಹಾಡಿ ಹೂಗಳಿ ಮೆರೆಸೋ ಅದೆಷ್ಟೋ ವಿಪರೀತ ಅನ್ನಿಸೋ ಅಂದಾಭಿಮಾನಿಗಳನ್ನು ನೀವು ನೋಡಿರ್ತೀರಾ ,ಕೆಲವೊಮ್ಮೆ ತನ್ನ ನೆಚ್ಚಿನ ನಾಯಕನ ಮೇಲಿರೋ ಅಭಿಮಾನ ತೋರಿಸೋ ಭರದಲ್ಲಿ ಅಪಾಯಕಾರಿ ಟ್ಯಾಟೂ ,ಡೇಂಜರಸ್ ಸ್ಟಂಟ್ ಅಥವಾ ಇನ್ನಿತರ ಅವಘಡಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ಉದಾಹರಣೆಗಳಿವೆ.
ಇದು ನಮ್ಮ ಯುವಕರ ಅತಿರೇಕದ ಅಂಧಾಬಿಮಾನದ ಪರಿಣಾಮ ಸುಂದರ ಜೀವನವನ್ನ ಹಾಳು ಮಾಡಿಕೊಳ್ಳುತ್ತಿರುವ ಪರಿ ,ಇನ್ನೂ ತಾರೆಗಾಗಿ ಜೀವ ಬಿಟ್ಟ ಯುವಕರ ಕುಟುಂಬವನ್ನ ತಾರೆ ಬಂದು ಸಾಂತ್ವಾನದ ಮಾತುಗಳನ್ನಾಡಬಹುದೇ ಹೊರತು ಬೇರೇನೂ ಮಾಡಲು ಸಾಧ್ಯ ,ಇನ್ನು ಯಶ್ ಮಾಡಿದ್ದು ಕೂಡ ಅದೇ ಅಲ್ವೇ ಧಾರುಣ ಅಂತ್ಯ ಕಂಡ ಯುವಕರ ಕುಟುಂಬವನ್ನ ಕಂಡು ಸಮಾಧಾನ ಪಡಿಸೋ ಮಾತನ್ನಾಡಿದ್ರು ,ಇನ್ನು ನಮಗಾಗಿ ನಿಮ್ಮ ಪ್ರಾಣ ತ್ಯಾಗ ಬೇಡ ,ಪ್ರೀತಿ ವಿಶ್ವಾಸ ಅಭಿಮಾನವನ್ನ ನೀವು ಉತ್ತಮರಾಗುವ ಮೂಲಕ ತೋರ್ಪಡಿಸಿ ಎಂದು ತನ್ನ ಅಭಿಮಾನಿಗಳಿಗೆ ಕೀವಿ ಮಾತು ಹೇಳಿ ಹೊರಟು ಹೋದ್ರು , ATLEAST ಆ ಕುಟುಂಬಕ್ಕೆ ಅಲ್ಲೇ ಪರಿಹಾರ ಘೋಷಿಸಬೇಕಿತ್ತಲ್ವೇ ಆದ್ರೆ ಆ ಕೆಲಸ ಅವರು ಮಾಡಿಲ್ಲ ,ಮುಂದೆ ಮಾಡಿದ್ರೆ ಸಂತೋಷ.
ಇನ್ನು ನಮ್ಮ ಯುವ ಜನಾಂಗಕ್ಕೆ ಒಂದು ಕಿವಿ ಮಾತು ,ನಿಮ್ಮ ಜೀವ ನಿಮ್ಮ ಜೀವನಕ್ಕೆ ಸಿನಿಮಾ ತಾರೆಗಳ ಪ್ರೇರಣೆ ಪ್ರಭಾವ ಬೀರುತ್ತೆ ಅನ್ನೋದು ತಪ್ಪಲ್ಲ ಅದನ್ನ ವಿರೋದಿಸುವುದು ಇಲ್ಲ ,ಆದ್ರೆ ನಿಮಗಾಜಿ ಸದಾ ಕಾಯುತ್ತಿರೋ ನಿಮ್ಮ ತಂದೆ ತಾಯಿ ಅಕ್ಕ ತಂಗಿ ,ನಿಮ್ಮ ಹೆಂಡತಿ ಮಕ್ಕಳ ಬಗ್ಗೆಯೂ ನೀವು ಯೋಚಿಸಬೇಕಲ್ಲವೇ ,ನಟ ನಟಿಯರನ್ನ ನೋಡೋ ಧಾವಂತಕ್ಕೆ ಬಿದ್ದು ಅತಿ ವೇಗದಲ್ಲಿ ವಾಹನ ಚಲಾಯಿಸ್ತೀರಿ ,ನಿಮ್ಮ ನಟನಿಗೆ ಅವಮಾನವಾದ ಮಾತ್ರಕ್ಕೆ ವಿಷ ಕುಡಿಯೋ ಸಾಹಸ ಮಾಡ್ತೀರಿ ,ರಾತ್ರಿ ನಿದ್ದೆಗೆಟ್ಟು ಬ್ಯಾನರ್ ಕಡ್ತೀರಿ ,ನಿಮ್ಮ ನಾಯಕ ನಟನನ್ನ ಸಮರ್ಥಿಸಿಕೊಳ್ಳೋದರ ಭಾಗವಾಗಿ ಕಲಹ ಮಾಡ್ತೀರಿ ಇವೆಲ್ಲ ಅತಿರೇಕ ಅನ್ನಿಸೋದು ಯಾವಾಗ.
ನಿಮ್ಮ ಜೀವಕ್ಕೆ ಕಂಟಕವಾಗೋ ಅಭಿಮಾನ ನಿಮಗೆ ಸಮ್ಮತಿಯೇ ನೀವೇ ಯೋಚಿಸಿ ,ಫ್ರೀಡಂ ಟಿವಿಯ ಆಗ್ರಹ ಇಷ್ಟೇ ಅಭಿಮಾನ ಸರಿ ಆದ್ರೆ ಅಂದಾಭಿಮಾನದ ಅಗತ್ಯವಿದೆಯೇ..? ಬಿಟ್ಟು ಬಿಡಿ ಗೆಳೆಯರೇ..ನಿಮ್ಮ ಹೆತ್ತವರ ಆಕ್ರಂದನಕ್ಕೆ ಸಮಾಧಾನ ಹೇಳೋದು ಕಷ್ಟ.