ಮುಂಬೈ : ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ಸೋಮವಾರ ತಮ್ಮ ಬದುಕಿನ ಹಾಡು ಮುಗಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯಪಡಿತರಾಗಿ್ದ್ ಪಂಕಜ್ ತಮ್ಮ 72ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಉದಾಸ್ ಕುಟುಂಬದವರು ಟ್ವೇಟ್ ಮೂಲಕ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಲಿವುಡ್​ನಲ್ಲಿ ಗಾಯನದ ಮೂಲಕ ತಮ್ಮದೇ ಛಾಪು ಮೂಡಿಸಿದ್ದರು. ಗಜಲ್ ಗಾಯಕ ಪಂಕಜ್ ಉದಾಸ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗಾಯಕ ಸೋನು ನಿಗಮ್ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ನನ್ನ ಬಾಲ್ಯದ ಪ್ರಮುಖ ಭಾಗ ಇಂದು ಕಳೆದುಹೋಗಿದೆ. ಪಂಕಜ್ ಉದಾಸ್ ಜೀ, ನಾನು ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ. ನೀವು ಇನ್ನಿಲ್ಲ ಎಂದು ಸೋನು ನಿಗಮ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಕಂಬನಿ ಮಿಡಿದಿದ್ದಾರೆ.
ಪಂಕಜ್ ಉದಾಸ್ ಅವರು ಮೇ17, 1951 ರಂದು ಗುಜರಾತ್​ನ ಜೆಟ್​ಪುರದಲ್ಲಿ ಜನಿಸಿದರು. ಅವರು 1980 ರಲ್ಲಿ ಆಹತ್​ ಎಂಬ ಹೆಸರಿನ ಗಜಲ್ ಆಲ್ಬಂ ಬಿಡುಗಡೆ ಮಾಡುವ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಬಾಲಿವುಡ್​ನಲ್ಲಿ ಸಂಜಯ್ ದತ್ ಅವರ ನಾಮ್ ಚಿತ್ರಕ್ಕಾಗಿ ಚಿತ್ತಿ ಆಯೀ ಹೈ ಎಂಬ ಟ್ರ್ಯಾಕ್ ಅನ್ನು ಹಾಡಿದ್ದರು. ಈ ಹಾಡನ್ನು ಜನ ಇಂದಿಗೂ ಗುನುಗುತ್ತಿರುವುದೇ ಅವರ ಗಾಯನಕ್ಕೆ ಸಾಕ್ಷಿ.

ಕನ್ನಡದಲ್ಲೂ ಎರಡು ಹಅಡುಗಳನ್ನು ಪಂಕಜ್ ಉದಾಸ್ ಹಅಡಿದ್ದಾರೆ. ಕನ್ನಡ ಬರದಿದ್ದರೂ ಕನ್ನಡ ಕಲಿತು ಈ ಹಾಡು ಹಾಡಿದ್ದರು ಎಂದು ಸುನೀಲ್ ಕುಮಾರ್ ದೇಸಾಯಿ ಪಂಕಜ್ ಅವರನ್ನು ನೆನಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮೊದಲ ಸಿನಿಮಾ ಸ್ಪರ್ಶ ಸೂಪರ್ ಡೂಪರ್ ಹಿಟ್ ಎನಿಸಿಕೊಂಡಿತ್ತು. ಈ ಸಿನಿಮಾದಲ್ಲಿ ಎಲ್ಲ ಹಾಡುಗಳೂ ಕುಡ ಹಿಟ್ ಆಗಿತ್ತು. ಅದರಲ್ಲೂ ಚೆಂದಕಿಂತ ಚೆಂದ ಹಾಡಂತೂ ಈಗಲೂ ಬಹು ಜನಪ್ರಿಯ. ಈ ಹಾಡಿಗೆ ದನಿಯಾಗಿದ್ದ ಪಂಕಜ್ ಉದಾಸ್ ಇನ್ನು ನೆನಪು ಮಾತ್ರ.

By admin

Leave a Reply

Your email address will not be published. Required fields are marked *

Verified by MonsterInsights