ಶಿವಮೊಗ್ಗ: ಪ್ರೀತಿ ವಿಚಾರಕ್ಕೆ ಕುಟುಂಬಸ್ಥರ ವಿರೋಧದ ಹಿನ್ನಲೆ ಇಬ್ಬರು ಪ್ರೇಮಿಗಳು ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಯುವತಿ ಸಾವನ್ನಪ್ಪಿರು ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಬಳಿ ನಡೆದಿದೆ.
19 ವರ್ಷದ ಸ್ವಾತಿ ಮೃತಪಟ್ಟಿದ್ದು, ಸೂರ್ಯ (20) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಂತರಗಂಗೆಯ ಬೋವಿ ಕಾಲೋನಿ ನಿವಾಸಿಗಳಾದ ಸ್ವಾತಿ ಹಾಗೂ ಸೂರ್ಯ ಕಳೆದ ಕೆಲ ವರ್ಷದಿಂದ ಪ್ರೀತಿಸುತ್ತಿದ್ರು. ಇಬ್ಬರ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಇಬ್ಬರು ನಾಲೆಗೆ ಹಾರಿದ್ದಾರೆ.. ಈ ವೇಳೆ ಸ್ಥಳೀಯರು ಯುವಕನನ್ನ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದು, ಯವತಿ ಸಾವನ್ನಪ್ಪಿದ್ದಾಳೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..


