ಕ್ರಿಕೆಟ್ಸುದ್ದಿ

ನರೇಂದ್ರ ಮೋದಿ, ಸಚಿನ್, ಧೋನಿ ಹೆಸರಿನಲ್ಲಿ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಕೆ..!

ಭಾರತ ತಂಡದ  ಮುಖ್ಯ ತರಬೇತುದಾರ ಹುದ್ದೆಗೆ ಬಿಸಿಸಿಐ 3 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದೆ. ಆದರೆ ಈ ಅರ್ಜಿಗಳಲ್ಲಿ ಬಹುತೇಕ ಅಪ್ಲಿಕೇಶನ್​ಗಳು ಫೇಕ್ ಎಂದು ತಿಳಿದು ಬಂದಿದೆ. ಅಂದರೆ ಈ ಹಿಂದೆ ಬಿಸಿಸಿಐ ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಅವಕಾಶವನ್ನು ಪಡೆದ ಹೆಚ್ಚಿನವರು ನಕಲಿ ಹೆಸರುಗಳೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್​, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಅಮಿತ್ ಶಾ ಸೇರಿದಂತೆ ಪ್ರಮುಖರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಇವರಲ್ಲಿ ಬಹುತೇಕರು ನಕಲಿ ಹೆಸರುಗಳನ್ನು ಹೊಂದಿರುವ ಕಾರಣ ಇದೀಗ ಅಸಲಿ ಯಾರು ಎಂಬುದನ್ನು ಪತ್ತೆ ಹಚ್ಚುವುದೇ ಬಿಸಿಸಿಐಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಂದಹಾಗೆ ಬಿಸಿಸಿಐಗೆ ಹೀಗೆ ನಕಲಿ ಅರ್ಜಿ ಬರುತ್ತಿರುವುದು ಇದೇ ಮೊದಲೇನಲ್ಲ. 2022 ರಲ್ಲಿ ಬಿಸಿಸಿಐ ಮುಖ್ಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ, ಸುಮಾರು 5,000 ಅರ್ಜಿಗಳನ್ನು ಸ್ವೀಕರಿಸಿದ್ದರು. ಇವುಗಳಲ್ಲೂ ಬಹುಪಾಲು ನಕಲಿಯಾಗಿತ್ತು.

ಇದಾಗ್ಯೂ ಈ ಬಾರಿ ಕೂಡ ಬಿಸಿಸಿಐ ಹಳೆಯ ತಪ್ಪನೇ ಮಾಡಿದೆ. ಗೂಗಲ್ ಫಾರ್ಮ್ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಭರ್ತಿ ಮಾಡುವಂತೆ ತಿಳಿಸಿದ್ದರಿಂದ ಇದೀಗ 3000 ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಇದೀಗ ಇವರಲ್ಲಿ ಯಾರು ಸಂಪೂರ್ಣ ಅರ್ಹತೆಯೊಂದಿಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುದನ್ನು ಬಿಸಿಸಿಐ ಪತ್ತೆ ಹಚ್ಚಬೇಕಿದೆ.

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಇರಬೇಕಾದ ಅರ್ಹತೆಗಳೇನು?

  • ಅಭ್ಯರ್ಥಿಯು ಕನಿಷ್ಠ 30 ಟೆಸ್ಟ್ ಪಂದ್ಯಗಳನ್ನು ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು.
  • ಅಥವಾ ಕನಿಷ್ಠ 2 ವರ್ಷಗಳ ಕಾಲ ಪೂರ್ಣ ಸದಸ್ಯರ ಟೆಸ್ಟ್ ಆಡುವ ದೇಶದ ಮುಖ್ಯ ಕೋಚ್ ಆಗಿರಬೇಕು.
  • ಅಥವಾ 3 ವರ್ಷಗಳ ಕಾಲ ಯಾವುದೇ ಅಸೋಸಿಯೇಟ್ ಸದಸ್ಯ ತಂಡ/ಯಾವುದೇ ಐಪಿಎಲ್ ತಂಡ, ಪ್ರಥಮ ದರ್ಜೆ ತಂಡ, ಯಾವುದೇ ದೇಶದ A
  • ತಂಡದ ತರಬೇತುದಾರರಾಗಿರಬೇಕು. ಅಥವಾ ಬಿಸಿಸಿಐನ ಲೆವೆಲ್-3 ಕೋಚಿಂಗ್ ಪ್ರಮಾಣಪತ್ರವನ್ನು ಹೊಂದಿರಬೇಕು.
  • 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಕೋಚ್​ನನ್ನು ಆಯ್ಕೆ ಮಾಡುವುದು ಹೇಗೆ?

ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಹತೆಯನ್ನು ಪರಿಶೀಲಿಸಿ, ಬಿಸಿಸಿಐಯ ಕ್ರಿಕೆಟ್ ಸಲಹಾ ಸಮಿತಿ ಅಂದರೆ CAC ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನ ಮಾಡುತ್ತದೆ. ಈ ಸಂದರ್ಶನದ ಸಂಪೂರ್ಣ ಮಾಹಿತಿಯನ್ನು ಬಿಸಿಸಿಐಗೆ ಒದಗಿಸಲಿದ್ದು, ಇದರ ಜೊತೆಗೆ ಯಾರು ಕೋಚ್ ಹುದ್ದೆಗೆ ಅರ್ಹ ಎಂಬದನ್ನು ಶಿಫಾರಸ್ಸು ಮಾಡಲಿದೆ. ಈ ಶಿಫಾರಸ್ಸನ್ನು ಪರಿಶೀಲಿಸಿ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button