Wednesday, February 11, 2026
17.3 C
Bengaluru
Google search engine
LIVE
ಮನೆಮನರಂಜನೆಇಡಾ ಚಿನ್ನೇ… ರಂಗಣ್ಣ ಮತ್ತೆ ಬರ್ತಿದ್ದಾನೆ! ‘ಆವೇಶಂ 2’ ಸಿನಿಮಾ ಘೋಷಣೆ

ಇಡಾ ಚಿನ್ನೇ… ರಂಗಣ್ಣ ಮತ್ತೆ ಬರ್ತಿದ್ದಾನೆ! ‘ಆವೇಶಂ 2’ ಸಿನಿಮಾ ಘೋಷಣೆ

ಮಲಯಾಳಂ ಚಿತ್ರರಂಗದ ‘ಫಾಫಾ’ ಎಂದೇ ಕರೆಯಲ್ಪಡುವ ಫಹಾದ್ ಫಾಸಿಲ್ ಅವರ ಕೆರಿಯರ್‌ನಲ್ಲಿ ‘ರಂಗ’ ಎಂಬ ಪಾತ್ರ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. 2024ರಲ್ಲಿ ತೆರೆಕಂಡ ‘ಆವೇಶಂ’ ಸಿನಿಮಾದಲ್ಲಿ ಬೆಂಗಳೂರಿನ ಡಾನ್ ಆಗಿ ಅವರು ನೀಡಿದ ಪರ್ಫಾರ್ಮೆನ್ಸ್‌ಗೆ ಇಡೀ ದೇಶವೇ ಫಿದಾ ಆಗಿತ್ತು. ಇದೀಗ ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ ತೆರೆಬಿದ್ದಿದ್ದು, ಸ್ವತಃ ಫಹಾದ್ ಅವರು ‘ಆವೇಶಂ 2’ ಸಿನಿಮಾದ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಿದ್ದಾರೆ.

ರಂಗಣ್ಣ ಕಮ್‌ಬ್ಯಾಕ್ ಪಕ್ಕಾ!
ಫೆಬ್ರವರಿ 9, 2026ರಂದು ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಫಹಾದ್ ಫಾಸಿಲ್, “ನಾನು ಎಲ್ಲಿಗೆ ಹೋದರೂ ಜನರು ಆವೇಶಂ ಸೀಕ್ವೆಲ್ ಬಗ್ಗೆ ಕೇಳುತ್ತಲೇ ಇರುತ್ತಾರೆ. ಹೌದು, ‘ಆವೇಶಂ 2’ ಖಂಡಿತಾ ಬರಲಿದೆ,” ಎಂದು ಘೋಷಿಸಿದ್ದಾರೆ. ಇದರೊಂದಿಗೆ ಚಿತ್ರದ ಶೂಟಿಂಗ್ ಮತ್ತು ಬಿಡುಗಡೆಯ ಕಾಲಮಿತಿಯ ಬಗ್ಗೆಯೂ ಮಾಹಿತಿ ನೀಡಿದ್ದು, ಬಹುಶಃ 2027ರ ಅಂತ್ಯ ಅಥವಾ 2028ರ ಆರಂಭದಲ್ಲಿ ಈ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ನಿರ್ದೇಶಕ ಜಿತು ಮಾಧವನ್ ಮತ್ತು ಸೂರ್ಯ ಕನೆಕ್ಷನ್
ಸದ್ಯ ಆವೇಶಂ ನಿರ್ದೇಶಕ ಜಿತು ಮಾಧವನ್ ಅವರು ತಮಿಳು ನಟ ಸೂರ್ಯ ಅವರ 47ನೇ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದ ಕಥೆಯೂ ಸಹ ಬೆಂಗಳೂರಿನ ಹಿನ್ನೆಲೆಯಲ್ಲೇ ನಡೆಯಲಿದ್ದು, ಸೂರ್ಯ ಇಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಇದು ‘ಆವೇಶಂ’ ಚಿತ್ರದ ‘ರಂಗ’ ಪಾತ್ರವೇ ಆಗಿರಬಹುದು ಎಂಬುದು ಅಭಿಮಾನಿಗಳ ಊಹೆ.

ವಿಲನ್ ಆಗಿ ಫಹಾದ್ ಮಿಂಚು
‘ಆವೇಶಂ 2’ ಮಾತ್ರವಲ್ಲದೆ, ಫಹಾದ್ ಅವರು ಮಲಯಾಳಂನ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಪೇಟ್ರಿಯಾಟ್’ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಫಹಾದ್ ಫಾಸಿಲ್ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 23, 2026ರಂದು ಬಿಡುಗಡೆಯಾಗಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments