Wednesday, August 20, 2025
18.3 C
Bengaluru
Google search engine
LIVE
ಮನೆರಾಜಕೀಯಯತ್ನಾಳ್​ ಉಚ್ಚಾಟನೆ; ಬಿಜೆಪಿ ವಿರುದ್ಧ ಪ್ರಮೋದ್ ಮುತಾಲಿಕ್ ಗುಡುಗು

ಯತ್ನಾಳ್​ ಉಚ್ಚಾಟನೆ; ಬಿಜೆಪಿ ವಿರುದ್ಧ ಪ್ರಮೋದ್ ಮುತಾಲಿಕ್ ಗುಡುಗು

ಧಾರವಾಡ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಮಾಡಿರುವುದನ್ನು ಬಿಜೆಪಿ ಹೈಕಮಾಂಡ್ ಮರು ಪರಿಶೀಲನೆ ಮಾಡಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಚ್ಚಾಟನೆ ಮಾಡಿರುವುದು ಪಕ್ಷದ ಆಂತರಿಕ ವಿಷಯ ಇರಬಹುದು. ಆದರೆ ಹಿಂದುತ್ವದ ಪಕ್ಷ ಬಿಜೆಪಿ. ಹೀಗಾಗಿ ಈ ಬೆಳವಣಿಗೆ ನಮಗೆ ಅಸಮಾಧಾನ ತರಿಸಿದೆ ಎಂದಿದ್ದಾರೆ. ಹಿಂದೂತ್ವದ ಪರವಾಗಿ ಮಾತನಾಡುವ ಗಟ್ಟಿ ಧ್ವನಿ ಯತ್ನಾಳ್‌ ಅವರು, ರಾಜ್ಯದಲ್ಲಿ ನೋವು, ಸಿಟ್ಟು, ವೇದನೆ ಎಲ್ಲರಿಗೂ ಇದೆ. ಹೀಗಾಗಿ ಕೇಂದ್ರದ ಬಿಜೆಪಿ ಪದಾಧಿಕಾರಿಗಳು ಪುನಃ ಯತ್ನಾಳರನ್ನು ಪುನಃ ಮತ್ತೆ ತೆಗೆದುಕೊಳ್ಳಬೇಕು. ಹಿಂದೂತ್ವದ ಬೆಳವಣಿಗೆಗೆ ಒತ್ತು ಕೊಡಬೇಕು ಅನ್ನೋದು ನಮ್ಮ ಆಗ್ರಹ ಎಂದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments