ಕೊಡಗು: ವಿರಾಜಪೇಟೆಯಲ್ಲಿ ಇಂದು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಯದುವೀರ್ ಒಡೆಯರವರು ಸಿನಿಮಾ ತಾರೆ ಬಿಜೆಪಿಯ ರಾಜ್ಯ ಮುಖಂಡರಾದ ಶ್ರೀಮತಿ ತಾರಾ ಅವರ ಜೊತೆಗೂಡಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಬುಧವಾರ ಪ್ರಚಾರ ಕಾರ್ಯ ಕೈಗೊಂಡರು.
ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ ಮಂಜುನಾಥ್ ಹಾಗೂ ಜೆಡಿಎಸ್ ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಕಾರ್ಯ ನಡೆಸಿದರು. ಬಿಜೆಪಿಯ ಪ್ರಚಾರ ವಾಹನದಲ್ಲಿ ಶಾಸಕರಾದ ಕೆ ಜಿ ಬೋಪಯ್ಯ, ಸುಜಾ ಕುಶಾಲಪ್ಪ, ಜಿಲ್ಲಾಧ್ಯಕ್ಷರ ರವಿಕಾಳಪ್ಪ, ಮುಂತಾದವರು ಉಪಸ್ಥಿತರಿದ್ದರು.