ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರ ಬಟ್ಟೆ ಮೇಲಿರುವ ರಕ್ತದ ಕಲೆಗಳನ್ನು ಪತ್ತೆ ಹಚ್ಚಲಾಗಿದೆ. ರೇಣುಕಾಸ್ವಾಮಿಯ ರಕ್ತದ ಕಲೆ ದರ್ಶನ್ ಬಟ್ಟೆ ಮೇಲೆ ಪತ್ತೆಯಾಗಿದ್ದು ಹೇಗೆ? ಆಲ್ ರೆಡಿ ವಾಶ್ ಮಾಡಲಾಗಿದ್ದ ಬಟ್ಟೆಗಳ ಮೇಲೆ ಬ್ಲಡ್ ಹೇಗೆ ಸರ್ಚ್ ಮಾಡಲಾಯಿತು? ರಕ್ತದ ಕಲೆಗಳನ್ನು ಪತ್ತೆ ಮಾಡಲೆಂದು ಇರುವ ಟೆಸ್ಟ್ ಯಾವುದು? ಅನ್ನೋ ಡಿಟೇಲ್ ಮಾಹಿತಿ ಇಲ್ಲಿದೆ.
ಪ್ರಕರಣದ ವೇಳೆ ದರ್ಶನ್ ಅವರು ಧರಿಸಿದ್ದ ಬ್ಲೂ ಜೀನ್ಸ್ ಹಾಗೂ ಕಪ್ಪು ಬಣ್ಣದ ರೌಂಡ್ ನೆಕ್ ಟೀಶರ್ಟ್ ಮೇಲೆ ರಕ್ತದ ಕಲೆಗಳು ಇರುವುದು ದೃಢವಾಗಿದೆ. ಎಫ್ಎಸ್ಎಲ್ ವರದಿ ಮೂಲಕ ನಟನ ಬಟ್ಟೆಗಳ ಮೇಲೆ ಇರುವುದು ರೇಣುಕಾಸ್ವಾಮಿಯ ರಕ್ತದ ಕಲೆಗಳು ಎಂದು ಗೊತ್ತಾಗಿದೆ. ಹೀಗಾಗಿ ಪ್ರಕರಣ ಇನ್ನಷ್ಟು ಜಟಿಲವಾಗಿದೆ. ದರ್ಶನ್ ಜೈಲಿನಿಂದ ಹೊರ ಬರುವುದು ಅಷ್ಟೊಂದು ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ಲುಮಿನಲ್ ಎಂಬುದು ಒಂದು ಕೆಮಿಕಲ್ ಆಗಿದೆ. ಯಾವ ಬಟ್ಟೆ ಮೇಲೆ ರಕ್ತದ ಕಲೆಗಳು ಇರುತ್ತವೆಯೋ ಅದನ್ನು ಖಚಿತಪಡಿಸಲಾಗಿರುತ್ತೆ. ಅದಕ್ಕೆ ಲುಮಿನಲ್ ಕೆಮಿಕಲ್ ಬಳಿಯಲಾಗುತ್ತದೆ. ಆಗ ಹಿಮೋಗ್ಲೋಬಿನ್ ಜೊತೆ ವರ್ತಿಸುವ ಲುಮಿನಲ್, ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದಿಸುತ್ತದೆ. ಬಟ್ಟೆಗಳನ್ನ ವಾಶ್ ಮಾಡಿದರೂ ಹಿಮೋಗ್ಲೋಬಿನ್ ಅಂಶ ಹೋಗಿರುವುದಿಲ್ಲ. ನೀಲಿ ಹಾಗೂ ಹಸಿರು ಬಣ್ಣದ ದ್ರಾವಣವನ್ನ ಸಂಗ್ರಹಿಸಿ ಆದರಿಂದ ಡಿಎನ್ಎ ಸಂಗ್ರಹಿಸಲಾಗುತ್ತದೆ. ಈ ರೀತಿಯಾಗಿ ರೇಣುಕಾಸ್ವಾಮಿಯ ರಕ್ತದ ಕಲೆಗಳನ್ನ ಪತ್ತೆ ಮಾಡಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಈ ಮೂರು ವಸ್ತುಗಳ ಬಗ್ಗೆ ಉಲ್ಲೇಖ ಮಾಡಿದ್ದು, ನ್ಯಾಯಾಲಯದಲ್ಲಿ ಈ ಮೂರು ವಸ್ತುಗಳಿಂದ ದರ್ಶನ್ಗೆ ಕಾನೂನು ಕಂಟಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.