ಕೋಲಾರ ಲೋಕಸಭೆ ಚುನಾವಣಾ ರಾಜಕೀಯಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಹೆಚ್ ಮುನಿಯಪ್ಪರನ್ನು, ಅವರ ವಿರೋಧಿ ಬಣದ ಕಾಂಗ್ರೆಸ್ ನಾಯಕರೇ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಯನ್ನು ಬೆಂಬಲಿಸಿ, ಗೆಲ್ಲಿಸಿದ್ದ ವಿಚಾರ ಗುಟ್ಟಾಗಿ ಉಳಿದಿಲ್ಲ. ಇದೀಗ ಮುಯ್ಯಿ ತೀರಿಸಿಕೊಳ್ಳಲು ಸಚಿವ ಮುನಿಯಪ್ಪ ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ.
ವಿರೋಧಿ ಬಣದ ಚಿತಾವಣೆ ಕಾರಣ ತಮ್ಮ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸುವಲ್ಲಿ ಸಚಿವ ಕೆಹೆಚ್ ಮುನಿಯಪ್ಪ ವಿಫಲರಾಗಿದ್ದರು. ಇದರಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ಸಚಿವ ಮುನಿಯಪ್ಪ, ಕಳೆದ ಬಾರಿ ತಮ್ಮ ವಿರೋಧಿ ಬಣ ಹೂಡಿದ್ದ ತಂತ್ರವನ್ನೇ ಅನುಸರಿಸಲು ಮುಂದಾದಂತೆ ಕಾಣ್ತಿದೆ.
ಮೂಲಗಳ ಪ್ರಕಾರ ಈಗಾಗಲೇ ಕೋಲಾರ ಜೆಡಿಎಸ್ ಘಟಕ ಸಚಿವ ಕೆಹೆಚ್ ಮುನಿಯಪ್ಪರನ್ನು ಭೇಟಿ ಮಾಡಿ ಮಾಡಿದೆ. ಅಲ್ಲದೇ, ಜೆಡಿಎಸ್ ವರಿಷ್ಠ ಹೆಚ್ಡಿ ಕುಮಾರಸ್ವಾಮಿ ಕೂಡ ಸಚಿವ ಮುನಿಯಪ್ಪ ಸಂಪರ್ಕದಲ್ಲಿದ್ದಾರೆ.. ಕೋಲಾರ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ಬಾಬು ಗೆಲುವಿಗೆ ಸಹಕರಿಸಿ ಎಂದು ಮುನಿಯಪ್ಪರನ್ನು ಕುಮಾರಸ್ವಾಮಿ ಕೋರಿದ್ದಾರೆ.. ಅಳಿಯ ಚಿಕ್ಕಪೆದ್ದಣ್ಣರನ್ನು ಜೆಡಿಎಸ್ಗೆ ಕಳಿಸಿ ಎಂದು ಆಫರ್ ಮಾಡಿದ್ದಾರೆ ಅಂತಾ ಹೇಳಲಾಗುತ್ತಿದೆ.
ಆದರೆ, ಸಚಿವ ಮುನಿಯಪ್ಪ ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ. ನನಗೆ ನಿರ್ಧಾರ ತಿಳಿಸಲು ಒಂದಿಷ್ಟು ಸಮಯ ಬೇಕು ಎಂದು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ
https://freedomtvlive.com/2024/04/07/rift-in-kolar-congress-again-kh-muniyappa-angry/